ಚಾಮರಾಜನಗರ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ಆಯ್ಕೆ

ಚಾಮರಾಜನಗರ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೊಳ್ಳೇಗಾಲದ ಅಬ್ದುಲ್ ಅಜೀಜ್ ಅವರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಸತತ ಕೆಲ್ಲಂಬಳ್ಳಿ ಸೋಮಶೇಖರ್, ಉಪಾಧ್ಯಕ್ಷರಾಗಿ ಹೊಸಹಳ್ಳಿ ಮಧುಸೂಧನ್, ಶಿವಶಂಕರ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗಾಗಿ ಇತ್ತೀಚೆಗೆ ಆನ್‌ಲೈನ್ ಮೂಲಕ ಮತದಾನ ನಡೆದಿತ್ತು.
ಒಟ್ಟು 556 ಮತಗಳು ಚಲಾವಣೆಯಾಗಿತ್ತು. ಈ ಪೈಕಿ 372 ಮತಗಳನ್ನು ಪಡೆದಿದ್ದ ಅಬ್ದುಲ್ ಅಜೀಜ್ ಅಧ್ಯಕ್ಷರಾದರೆ, ಪ್ರತಿಸ್ಪರ್ಥಿಗಳಾಗಿದ್ದ ಶಿವಶಂಕರ್, ಮಧುಸೂಧನ್ ಉಪಾಧ್ಯಕ್ಷರಾಗಿ ನೇಮಕವಾದರು. ಕೆಲ್ಲಂಬಳ್ಳಿ ಸೋಮಶೇಖರ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಸನ್ಮಾನ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗುರುವಾರ ಭೇಟಿ ನೀಡಿದ ಯುವ ಕಾಂಗ್ರೆಸ್‌ನ ತಂಡವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್ ಇತರರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಆಜೀಜ್ ಅವರು, ‘ಸಾಮಾನ್ಯ ಕುಟುಂಬದಿಂದ ಬಂದ ನನ್ನನ್ನು ಕಾಂಗ್ರೆಸ್ ಪಕ್ಷ ಗುರುತಿಸಿ, ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ಸ್ಥಾನವನ್ನು ನೀಡಿದೆ. ಯುವನಾಯಕ ರಾಹುಲ್‌ಗಾಂಧಿ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡಲು ಬದ್ದನಾಗಿದ್ದೇನೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಕಾರ್ಮಿಕ ವಿಭಾಗದ ಅಧ್ಯಕ್ಷ ವಿಷಕಂಠಮೂರ್ತಿ, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷರಾದ ಚಾಮರಾಜನಗರದ ಸಲ್ಮಾನ್ ಅಜಾದ್, ಕೊಳ್ಳೇಗಾಲದ ವರುಣಾ, ಮುಖಂಡರಾದ ಕೆಂಪರಾಜು ಡಿ, ಮಧುಸೂಧನ್ ಕೆಬ್ಬೇಪುರ, ಸೈಯದ್ ಮುಜಿಯಾದ್, ರಾಜಕುಮಾರ್, ಸಿದ್ದರಾಜನಾಯಕ, ಶಂಕರ್, ಅಜಯ್ ಶಂಭು ಮೊದಲಾದವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.