ಸೋಮವಾರ, ಆಗಸ್ಟ್ 8, 2022
24 °C

ಚಾಮರಾಜನಗರ: 856ಕ್ಕೆ ಇಳಿದ ಸಕ್ರಿಯ ಪ್ರಕರಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 98 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 170 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. 

ಗುಣಮುಖರಾದವರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 856ಕ್ಕೆ ಇಳಿದಿದೆ. ಐಸಿಯುನಲ್ಲಿ 45 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೊಲೇಷನ್‌ನಲ್ಲಿ 23 ಜನರಿದ್ದಾರೆ. ಉಳಿದವರು ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದಾರೆ. 

ಜಿಲ್ಲೆಯಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿದೆ. ಈವರೆಗೆ 30,096 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಸೋಂಕು ಮುಕ್ತರಾದವರ ಸಂಖ್ಯೆ 28,752ಕ್ಕೆ ಏರಿದೆ. 

ಶನಿವಾರ 1,808 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,710 ವರದಿಗಳು ನೆಗೆಟಿವ್‌ ಬಂದು, 98 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 

98 ಮಂದಿ ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 28, ಗುಂಡ್ಲುಪೇಟೆಯ 31, ಕೊಳ್ಳೇಗಾಲದ 10, ಹನೂರಿನ 17, ಯಳಂದೂರು ತಾಲ್ಲೂಕಿನ ಏಳು ಹಾಗೂ ಹೊರ ಜಿಲ್ಲೆಗಳ ಐವರು ಸೇರಿದ್ದಾರೆ. 

ಗುಣಮುಖರಾದ 170 ಮಂದಿಯಲ್ಲಿ ಆಸ್ಪತ್ರೆಯಲ್ಲಿ 12 ಮಂದಿ, ಕೋವಿಡ್‌ ಕೇರ್‌ ಕೇಂದ್ರದಲ್ಲಿ 148, ಹೋಂ ಐಸೊಲೇಷನ್‌ನಲ್ಲಿ 10 ಜನರು ಇದ್ದರು.

ಚಾಮರಾಜನಗರ ತಾಲ್ಲೂಕಿನ 54, ಗುಂಡ್ಲುಪೇಟೆಯ 41, ಕೊಳ್ಳೇಗಾಲದ 23, ಹನೂರಿನ 26, ಯಳಂದೂರು ತಾಲ್ಲೂಕಿನ 14 ಹಾಗೂ ಹೊರ ಜಿಲ್ಲೆಯ ಇಬ್ಬರು ಶನಿವಾರ ಸೋಂಕು ಮುಕ್ತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು