ಮಂಗಳವಾರ, ನವೆಂಬರ್ 24, 2020
25 °C
1,139 ಪರೀಕ್ಷೆ, 38 ಪ್ರಕರಣ ದೃಢ, 163 ಮಂದಿ ಗುಣಮುಖ

ಚಾಮರಾಜನಗರ: ಸಕ್ರಿಯ ಪ್ರಕರಣ ಸಂಖ್ಯೆ 378ಕ್ಕೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್‌–19ನಿಂದ 163 ಮಂದಿ ಗುಣಮುಖವಾಗಿದ್ದು, 38 ಹೊಸ ಪ್ರಕರಣಗಳಷ್ಟೇ ದೃಢಪಟ್ಟಿವೆ. ಸಾವಿನ ಪ್ರಕರಣ ವರದಿಯಾಗಿಲ್ಲ. 

ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕೈದು ದಿನಗಳಿಂದ ಇಳಿಮುಖವಾಗುತ್ತಿದ್ದು, ಸದ್ಯ 378 ಮಂದಿ ಸೋಂಕಿತರು ಜಿಲ್ಲೆಯಲ್ಲಿದ್ದಾರೆ. ಈ ಪೈಕಿ 182 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ 43 ಮಂದಿ ಇದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆಗಳು ಹಾಗೂ ಕೇರ್‌ ಕೇಂದ್ರಗಳಲ್ಲಿ ಇದ್ದಾರೆ. 

ಶುಕ್ರವಾರದ ಹೊಸ ಪ್ರಕರಣಗಳು ಸೇರಿದಂತೆ ಇದುವರೆಗೆ 5,725 ಪ್ರಕರಣಗಳು ದೃಢಪಟ್ಟಿವೆ. 5,229 ಮಂದಿ ಸೋಂಕು ಮುಕ್ತರಾಗಿದ್ದಾರೆ. ಎರಡು ದಿನಗಳಿಂದ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಈವರೆಗೆ ಕೋವಿಡ್‌ನಿಂದಾಗಿ 99 ಹಾಗೂ ಬೇರೆ ಅನಾರೋಗ್ಯಗಳಿಂದ 19 ಮಂದಿ ಮೃತಪಟ್ಟಿದ್ದಾರೆ. 

ಶುಕ್ರವಾರ 1,139 ಮಂದಿಯ ಗಂಟಲು ದ್ರವ ಮಾದರಿಗಳನ್ನು ‍ಪರೀಕ್ಷೆಗೆ ಒಳಪಡಿಸಲಾಗಿದ್ದು, 946 ಪರೀಕ್ಷೆಗಳನ್ನು ಆರ್‌ಟಿಪಿಸಿಆರ್‌, 193 ರ‍್ಯಾಪಿಡ್‌ ಆ್ಯಂಟಿ ಜೆನ್‌ ಕಿಟ್‌ ಪರೀಕ್ಷೆಗಳನ್ನು ನಡೆಸಲಾಗಿದೆ. 1,101 ಮಂದಿಯ ವರದಿ ನೆಗೆಟಿವ್‌ ಬಂದಿದ್ದು, 38 ಮಂದಿಗೆ ಸೋಂಕು ಖಚಿತವಾಗಿದೆ. ಈ ಪೈಕಿ 20 ಜನರು ಚಾಮರಾಜನಗರ ತಾಲ್ಲೂಕಿನವರು. ಗುಂಡ್ಲುಪೇಟೆಯ ಏಳು, ಯಳಂದೂರಿನ ನಾಲ್ವರು, ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕಿನ ತಲಾ ಮೂವರು, ಹೊರ ಜಿಲ್ಲೆಯ ಒಬ್ಬರು ಇದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 86,447 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ 80,839 ಮಂದಿಯ ವರದಿ ನೆಗೆಟಿವ್‌ ಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು