ಪ್ರಜಾವಾಣಿ ವಾರ್ತೆ

ಚಾಮರಾಜನಗರ: ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಗಳು ಅಧ್ಯಯನ ಕೇಂದ್ರಗಳಾಗಬೇಕು ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಭೋಗಾಪುರ ಗ್ರಾಮದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಶಿಕ್ಷಣಕ್ಕೆ ಜೀವನವನ್ನು ಬದಲಿಸುವ ಶಕ್ತಿ ಇದ್ದು, ಭೋಗಾಪುರ ಗ್ರಾಮದಲ್ಲಿರುವ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಂಬೇಡ್ಕರ್ ಸಮುದಾಯ ಭವನವನ್ನು ಅಧ್ಯಯನ ಕೇಂದ್ರವನ್ನಾಗಿ ಬದಲಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು, ಹೋಬಳಿ, ಗ್ರಾಮಗಳಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಸಮುದಾಯ ಭವನಗಳು ದೂಳು ಹಿಡಿದಿವೆ. ಭವನದೊಳಗಿನ ಸಾಮಗ್ರಿಗಳು ಹಾಳಾಗಿವೆ, ಫ್ಯಾನುಗಳು ದುರಸ್ತಿಯಲ್ಲಿದ್ದು, ಕಿಟಕಿ ಬಾಗಿಲುಗಳು ಮುರಿದು ಬಿದ್ದಿವೆ. ಭೋಗಾಪುರ ಗ್ರಾಮದ ಚರಿತ್ರೆ ಶಿಕ್ಷಣದ ಮೂಲಕ ಬದಲಾಗಲಿ. ಮಕ್ಕಳ ಕೈಗೆ ಲೇಖನಿ ಕೊಟ್ಟರೆ ಗ್ರಾಮದ ಚಿತ್ರಣ ಬದಲು ಮಾಡುತ್ತಾರೆ ಎಂದರು.

ದೇಶದಲ್ಲಿರುವ 7 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ದಲಿತ ಸಮುದಾಯದವರು ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನಗಳು ಇಲ್ಲ. ಎಸ್ಎಸ್ಎಲ್ಸಿ, ಪಿಯುಸಿ ಹಂತದಲ್ಲಿ ಶಾಲೆಬಿಟ್ಟ ಮಕ್ಕಳು ಕಲ್ಯಾಣ ಮಂಟಪಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಸಮುದಾಯದ ಶಿಕ್ಷಣದ ಮಹತ್ವವನ್ನು ಅರಿಯಬೇಕು ಎಂದು ಕರೆ ನೀಡಿದರು.

ರಾಜಕಾರಣಿಗಳಿಗೆ ತಾಯ್ತನದ ಹೃದಯ ಇರಬೇಕು, ಈ ನೆಲದಲ್ಲಿ ಜನಿಸಿ ಸಾಧನೆ ಮಾಡಿದ ಮಾಜಿ ರಾಜ್ಯಪಾಲರಾದ ದಿ.ಬಿ.ರಾಚಯ್ಯನವರು ರಾಗಿ ಹೊಲದಿಂದ ರಾಜಭವನದವರೆಗೂ ಬೆಳೆದು ನಿಂತರು. ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಪ್ರತಿಫಲವಾಗಿ ಸಿದ್ದಯ್ಯನಪುರದಿಂದ ಹಿಡಿದು ಚಂದಕವಾಡಿ, ಬಿಸಲವಾಡಿ, ಅಮಚವಾಡಿ ಸಹಿತ ಹಲವು ಗ್ರಾಮಗಳಲ್ಲಿ ಅವರ ಭಾವಚಿತ್ರಗಳನ್ನು ಕಾಣಬಹುದಾಗಿದೆ ಎಂದರು.

ಅಂಬೇಡ್ಕರ್ ಎಂದರೆ ಭಾಷಣವಲ್ಲ ತ್ಯಾಗ ಎಂಬುದನ್ನು ಸಮಾಜ ಅರಿಯಬೇಕು. ದಲಿತ ಸಮುದಾಯದ ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರ ಅಂಬೇಡ್ಕರ್ ನಮ್ಮೊಳಗೆ ಜೀವಂತವಾಗಿರುತ್ತಾರೆ. ಭಾಷಣ, ಪ್ರತಿಮೆಯಲ್ಲಿ ಅಂಬೇಡ್ಕರ್ ನೆಲೆಸಿಲ್ಲ. ಓದು, ಬರವಣಿಗೆ, ಪುಸ್ತಕದಲ್ಲಿ ಅಂಬೇಡ್ಕರ್ ಇದ್ದಾರೆ.

ಮಕ್ಕಳ ಕೈಗೆ ಪುಸ್ತಕಗಳನ್ನು ಕೊಟ್ಟು ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರೆ ಭವಿಷ್ಯದಲ್ಲಿ ಶಿಕ್ಷಣ ಕ್ರಾಂತಿಯಾಗಲಿದೆ. ಅಂಬೇಡ್ಕರ್ ಕನಸು ನನಸಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಸಮಾಜದಲ್ಲಿರುವ ಸರ್ವರಿಗೂ ಮೀಸಲಾತಿ ಕೊಟ್ಟಿದ್ದಾರೆ. ನಾಲ್ಕು ಬಾರಿ ಶಾಸಕನಾಗಲೂ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಅಂಬೇಡ್ಕರ್ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಹೋಗೋಣ ಎಂದರು.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಂಬೇಡ್ಕರ್ ಸಮುದಾಯ ಭವನಗಳು ಸದ್ಬಳಕೆಯಾಗದೆ ಕೆಟ್ಟ ಕೆಲಸಗಳಿಗೆ ಬಳಕೆಯಾಗುತ್ತಿದೆ. ಗ್ರಾಮದ ಯಜಮಾನರು ಈ ಬಗ್ಗೆ ಗಮನಹರಿಸಬೇಕು, ಸಮುದಾಯಗಳನ್ನು ಒಳ್ಳೆಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭೋಗಾಪುರ ವಸತಿಯುತ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪಿ.ದೇವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆರ್.ಮಹದೇವು, ಶಾಂತಕುಮಾರಿ, ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ಪಿಡಿಒ ಮಾನಸ, ಕುದೇರು ಠಾಣೆಯ ಪಿಎಸ್ಐ ಈಶ್ವರ್, ಯಜಮಾನರಾದ ಮಹಾಲಿಂಗು, ಶ್ರೀಧರ್, ಮಲ್ಲಿಕಾರ್ಜುನ, ಮುಖಂಡರಾದ ಮಹೇಶ್ ಕುದರ್, ಗುರುಲಿಂಗಯ್ಯ, ಶಿವಮಲ್ಲಯ್ಯ, ರವಿ, ಚನ್ನಕೇಶವ, ಪ್ರಕಾಶ್, ಕೆಂಪರಾಜು, ದರ್ಶನ್, ಸಚಿನ್ ಜಯರಾಂ, ರಾಜೇಶ್, ಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.