ಭಾನುವಾರ, ಆಗಸ್ಟ್ 1, 2021
27 °C

ಚಾಮರಾಜನಗರದಲ್ಲಿ ಕೋವಿಡ್-19 ನಿಂದ ಮತ್ತೊಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಂಡ್ಲುಪೇಟೆಯ 65 ವರ್ಷದ ವೃದ್ಧರೊಬ್ಬರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಮರದ ವ್ಯಾಪಾರಿಯಾಗಿದ್ದ ಅವರು, ಎಪಿಎಂಸಿಯ ಮಾಜಿ ನಿರ್ದೇಶಕರು. ಕೋವಿಡ್-19 ಆಸ್ಪತ್ರೆಯ ಐಸಿಯುನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಸಾವಿನೊಂದಿಗೆ ಚಾಮರಾಜನಗರದಲ್ಲಿ ಈ ವರೆಗೆ ಕೋವಿಡ್‌ಗೆ ಮೂರ ಬಲಿಯಾದಂತಾಗಿದೆ. 

ಅವರ ಪತ್ನಿ, ಮಗ, ಮಗಳು ಹಾಗೂ ಅಳಿಯ ಕೂಡ ಕೋವಿಡ್-19ಗೆ ತುತ್ತಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು