ಮಹದೇಶ್ವರ ಬೆಟ್ಟ: ವಿಜಯದಶಮಿ ಮತ್ತು ಆಯುಧ ಪೂಜೆ ಪ್ರಯುಕ್ತ ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಎರಡು ದಿನಗಳ ಕಾಲ ವಿವಿಧ 0ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಪೂಜೆ, ಉತ್ಸವಗಳು ನಡೆದವು.
ಆಯುಧ ಪೂಜೆಯ ಅಂಗವಾಗಿ ಬೇಡಗಂಪಣ ಪೂಜಾ ವಿಧಾನಗಳೊಂದಿಗೆ ಮೈಸೂರಿನ ರಾಜ ಮನೆತನದ ರಾಜರು ನೀಡಿದ್ದ ಕತ್ತಿ ಗುರಾಣಿ, ನವರತ್ನ ಕಿರೀಟ, ಖಡ್ಗ ಸೇರಿದಂತೆ ಹಲವು ಆಯುಧಗಳು, ಬೆಲೆಬಾಳುವ ವಸ್ತುಗಳಿಗೆ ಪೂಜೆ ಸಲ್ಲಿಸಲಾಯಿತು. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಹಾಗೂ ಇತರ ಅಧಿಕಾರಿಗಳೂ ಪೂಜೆ ಸಲ್ಲಿಸಿದರು.
ನವರಾತ್ರಿ, ವಿಜಯ ದಶಮಿ ಅಂಗವಾಗಿ ಬೆಟ್ಟದಲ್ಲಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.
ಭಾರಿ ಸಂಖ್ಯೆಯಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನಿರಂತರ ಅನ್ನ ದಾಸೋಹ, ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸಿತ್ತು.
ಭಕ್ತರಿಗೆ ಧರ್ಮ ದರ್ಶನವಲ್ಲದೆ ವಿಶೇಷ ಸರದಿ ಸಾಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಂಗಳವಾರ ಸಂಜೆ ನಡೆದ ಚಿನ್ನದ ರಥೋತ್ಸವದಲ್ಲಿ ಜಿಲ್ಲೆಯ, ಜೊರ ಜಿಲ್ಲೆಗಳು ಮಾತ್ರವಲ್ಲದೆ, ತಮಿಳುನಾಡಿನಿಂದಲೂ ಬಂದಿದ್ದ ಭಕ್ತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.