ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಆಗಾಗ ಮಳೆಯಾಗುತ್ತಿರುವುದರಿಂದ ಅಲ್ಪಮಟ್ಟಿಗೆ ಕಾಳ್ಗಿಚ್ಚು ಆತಂಕ ದೂರವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಟ್ಟುಸಿರುಬಿಟ್ಟಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೊಳಪಡುವ ಬಂಡೀಪುರ, ಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ, ಮದ್ದೂರು, ಮೂಲೆಹೊಳೆ, ಹೆಡಿಯಾಲ ಉಪ ವಿಭಾಗದ ವಲಯಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದ್ದು ಅರಣ್ಯದೊಳಗೆ ಹಸಿರು ಚಿಗುರುತ್ತಿದ್ದು ಬೆಂಕಿ ಆತಂಕ ಕಡಿಮೆಯಾಗಿದೆ.

ಈ ವಾರ ಎರಡರಿಂದ ಮೂರು ಬಾರಿ ಮಳೆ ಬಿದ್ದಿರುವುದರಿಂದ ಅರಣ್ಯದೊಳಗೆ, ಬಫರ್ ವಲಯ ಹಾಗೂ ಕಾಡಂಚಿನ ಭೂಮಿಗಳಲ್ಲಿ ನೀರಿನ ಪಸೆ ಹೆಚ್ಚಾಗಿದ್ದು ಹಳ್ಳ ಕೊಳ್ಳಗಳಲ್ಲಿ ನೀರು ಸಂಗ್ರಹವಾಗಿದೆ.

ಫೆಬ್ರವರಿಯಲ್ಲಿ ಅಕಾಲಿಕ ಮಳೆಯಾಗಿದ್ದರಿಂದ ಕಾಡಿನೊಳಗೆ ಹಸಿರು ಚಿಗುರೊಡೆಯಲು ಆರಂಭಿಸಿತ್ತು. ಇದಕ್ಕೆ ಪೂರಕವಾಗಿ ಮತ್ತೆ ಮಾರ್ಚ್ನಲ್ಲಿ ಎರಡು ಭಾರಿ ಮಳೆಯಾಗಿದ್ದರಿಂದ ಕಾಳ್ಗಿಚ್ಚು ಆತಂಕ ಸ್ವಲ್ಪ ಕಡಿಮೆಯಾಗಿದ್ದು ಮೇವಿನ ಕ್ಷೇತ್ರ ವಿಸ್ತಾರವಾಗುತ್ತಿದ. ಸಸ್ಯಹಾರಿ ಪ್ರಾಣಿಗಳಿಗೆ ಅಗತ್ಯ ಪ್ರಮಾಣದ ಆಹಾರ ಹಾಗೂ ನೀರು ಸಿಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಕಾಳ್ಗಿಚ್ಚು ಹಬ್ಬುವ ಆತಂಕದಿಂದ ಕಳೆದ ಕೆಲವು ತಿಂಗಳಿನಿಂದ ಅರಣ್ಯ ವೀಕ್ಷಕರು ಹಾಗೂ ಸಿಬ್ಬಂದಿಗೆ ಕಾರ್ಯದೊತ್ತಡ ಹೆಚ್ಚಾಗಿತ್ತು. ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಕಾಡಿನ ಹಾದಿಯಲ್ಲಿ ಧೂಮ ಪಾನ ಮಾಡಿ ಬಿಸಾಡುವ ಸಿಗರೇಟು ತುಂಡುಗಳು ಬೆಂಕಿ ಅವಘಡಕ್ಕೆ ಕಾರಣವಾಗುವ ಅಪಾಯ ಹೆಚ್ಚಾಗಿದ್ದರಿಂದ ಪ್ರತಿನಿತ್ಯ ಹೆದ್ದಾರಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಚೆಕ್ಪೋಸ್ಟ್ ಬಳಿಯೂ ಅರಣ್ಯ ಇಲಾಖೆ ಸಿಬ್ಬಂದಿ ಧೂಮಪಾನ ಮಾಡದಂತೆ ಪ್ರವಾಸಿಗರು ಹಾಗೂ ವಾಹನ ಚಾಲಕರಿಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಬಿಸಿಲಿನ ಧಗೆ ಹೆಚ್ಚಾಗುತ್ತಾ ಕಾಡು ಒಣಗುತ್ತಿದ್ದಂತೆ ಆತಂಕವೂ ಹೆಚ್ಚಾಗಿತ್ತು. ಆದರೆ ಈಚೆಗೆ ಅಕಾಲಿಕವಾಗಿ ಸುರಿದ ಮಳೆ ಸ್ವಲ್ಪಮಟ್ಟಿಗೆ ಆತಂಕ ದೂರ ಮಾಡಿದೆ, ಸಿಬ್ಬಂದಿಯ ಕಾರ್ಯದೊತ್ತಡವೂ ಕಡಿಮೆಯಾಗಿದೆ ಎನ್ನುತ್ತಾರೆ ಅರಣ್ಯ ವೀಕ್ಷಕರು.

ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಬೆಂಕಿ ರೇಖೆಗಳನ್ನು ಮಾಡಲಾಗಿತ್ತು. ಅದೇ ಜಾಗದಲ್ಲಿ ಹಸಿರು ಹುಲ್ಲು ಬೆಳೆಯಲಾರಂಭಿಸಿದೆ. ಮತ್ತೆ ಮಳೆಯಾದರೆ ಕಾಡು ಸಂಪೂರ್ಣವಾಗಿ ಚಿಗುರುತ್ತದೆ.

ಸಮೃದ್ಧ ಮಳೆಯಾಗಿ ಕಾಳ್ಗಿಚ್ಚು ಸಂಪೂರ್ಣ ನಿಯಂತ್ರಣಕ್ಕೆ ಬಂದರೆ ಕಾಳ್ಗಿಚ್ಚು ತಡೆಗೆ ನಿಯೋಜನೆ ಮಾಡಿಕೊಂಡಿರುವ ಸ್ಥಳೀಯ ಗಿರಿಜನ ಸಮುದಾಯದವರನ್ನು ಕಾಡಿನ ಕಳೆಯಾದ ಲಂಟಾನಾ ತೆರವು ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುವುದು. ಲಂಟಾನಾ ಕಿತ್ತ ಜಾಗದಲ್ಲಿ ಸ್ಥಳೀಯ ಪ್ರಬೇಧಗಳ ಹುಲ್ಲಿನ ತಳಿಗಳನ್ನು ಬೆಳೆಸಲಾಗುವುದು. ಏಪ್ರಿಲ್ ಹಾಗೂ ಮೇ ಹೊರತುಪಡಿಸಿ ಉಳಿದೆಲ್ಲ ತಿಂಗಳು ಗಿರಿಜನರಿಗೆ ಕೆಲಸ ಸಿಗುತ್ತದೆ ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-37-1272553990

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.