ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ತಾಯಿ ಹುಲಿಯೊಂದು ಗುರುವಾರ ಎರಡು ಮರಿಗಳ ಜೊತೆಗೆ ಸಪಾರಿ ಮಾರ್ಗದಲ್ಲಿ ನೀರು ಕುಡಿಯುವ ಫೋಟೊಗಳನ್ನು ಸಫಾರಿಗರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸಫಾರಿ ವಲಯವಾದ ಮೂರ್ಕೆರೆ ಸಮೀಪ ಹಾದುಹೋಗಿರುವ ರಸ್ತೆಯ ಮಧ್ಯೆ ಇರುವ ಗುಂಡಿಯಲ್ಲಿ ತುಂಬಿದ್ದ ನೀರನ್ನು ಹುಲಿ ಕುಡಿಯುತ್ತಿರುವುದು ಹಾಗೂ ಮರಿಗಳು ಗಮನಿಸುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಸಫಾರಿ ಮಾಡುವಾಗ ಹುಲಿಗಳು ಮರಿಗಳೊಂದಿಗೆ ದರ್ಶನ ನೀಡುವುದು ಅಪರೂಪ. ಈ ದೃಶ್ಯಗಳನ್ನು ಕಂಡು ಸಫಾರಿಗರು ಪುಳಕಿತಗೊಂಡಿದ್ದಾರೆ.

ಬಂಡೀಪುರ ಅರಣ್ಯದೊಳಗೆ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು ಸಫಾರಿ ಮಾಡುವಾಗ ಅಲ್ಲಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡಿನೊಳಗೆ ಸಹಜವಾಗಿ ಹುಲಿಗಳು ಅಡ್ಡಾಡುವುದನ್ನು ಹಾಗೂ ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರಾಣಿಪ್ರಿಯರು ಹೆಚ್ಚು ಉತ್ಸಕತೆ ತೋರುತ್ತಿದ್ದಾರೆ. ಕಳೆದ 15 ದಿನಗಳಲ್ಲಿ ಎರಡು ಬಾರಿ ಮಳೆ ಬಿದ್ದಿರುವುದರಿಂದ ಬಂಡೀಪುರದೊಳಗೆ ಹಸಿರು ಚಿಗುರೊಡೆದಿದ್ದು ಕಣ್ಮನ ಸೆಳೆಯುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-37-1389763572

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.