ಬುಧವಾರ, ಜೂಲೈ 8, 2020
27 °C

ಬಂಡೀಪುರ: 20 ಹಸು, ಮೇಕೆ ಬಲಿ ಪಡೆದಿದ್ದ ಹುಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯಲ್ಲಿ ಸುಮಾರು 20 ಹಸು ಮತ್ತು ಮೇಕೆ ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಮಂಗಳವಾರ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬೆಳಿಗ್ಗೆಯಿಂದ ಸಿಬ್ಬಂದಿ ಮತ್ತು ವೈದ್ಯರು ಆನೆಗಳ ಸಹಾಯದಿಂದ ಹುಲಿಗೆ ಪತ್ತೆಗೆ ಹುಡುಕಾಡಿದರು. ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಅಕ್ರಂ ಎಂಬುವವರು ಹುಲಿ ಅರಿವಳಿಕೆ ಚುಚ್ಚುಮದ್ದು ಶೂಟ್ ಮಾಡಲು ಯಶಸ್ವಿಯಾದರು.

ಬಳಿಕ ಹುಲಿಯು ಕುಂದುಕೆರೆ ವಲಯದ ಪರಮೇಶ್ವರಪ್ಪ ಅವರ ಜಮೀನ ಬಳಿ ಸೆರೆಯಾಯಿತು.

ಇದನ್ನೂ ಓದಿ: ಬಂಡೀಪುರ: ಹುಲಿ ಸೆರೆ ಕಾರ್ಯಾಚರಣೆ ಆರಂಭ

ಜಯಪ್ರಕಾಶ, ಪಾರ್ಥಸಾರಥಿ ಗಣೇಶ, ರೋಹಿತ ಸಾಕಾನೆಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡವು.

ಕುಂದುಕೆರೆ ವಲಯದ ಚಿರಕನಹಳ್ಳಿ, ಕಡಬೂರು, ಕುಂದುಕೆರೆ, ಮಾಲಾಪುರ, ಬೊಮ್ಮನಹಳ್ಳಿ, ವಡ್ಡಗೆರೆ ಭಾಗದ ಜನರಿಗೆ ಈ ಹುಲಿಯಿಂದ ಹೆಚ್ಚು ತೊಂದರೆ ಆಗಿತ್ತು. ಸದ್ಯ ಹುಲಿಯನ್ನು ಸೆರೆಹಿಡಿದಿರುವುದರಿಂದ ಸುತ್ತಮುತ್ತಲಿನ ರೈತರಿಗೆ ಜನರು ನೆಮ್ಮದಿ ತಂದಿದೆ.

ಸೆರೆ ಹಿಡಿದ ಹುಲಿಯನ್ನು ಎಲ್ಲಿಗೆ ಬಿಡಬೇಕು ಎಂದು ಪಿಸಿಸಿಎಫ್ ಅವರು ತೀರ್ಮಾನ ಮಾಡಬೇಕು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು