ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಮಾಯಾರ್‌ ಕಿಂಗ್‌ ಹೊಸ ಆಕರ್ಷಣೆ

Last Updated 22 ಜುಲೈ 2020, 14:32 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿಯೊಂದು, ವಾಹನದಲ್ಲಿ ಹೋಗುತ್ತಿದ್ದವರನ್ನು ರಾಜ ಗಾಂಭೀರ್ಯದಲ್ಲಿ ನೋಡಿ ನಂತರ ತನ್ನ ಪಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಇದು ಬಂಡೀಪುರದ ವಿಡಿಯೊ ಎಂದು ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

ಹುಲಿಯು ದಷ್ಟಪುಷ್ಟವಾಗಿದ್ದು, 6 ರಿಂದ 8 ವರ್ಷ ಆಗಿರಬಹುದು ಎಂದು ಹೇಳಲಾಗುತ್ತಿದೆ. ಕೆಲವು ದಿನಗಳಿಂದೀಚೆಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಜನರು ಎದುರುಗಡೆ ಇದ್ದರೂ ಯಾವುದೇ ಪ್ರತಿಕ್ರಿಯೆ ತೋರದೆ, ಸುಮ್ಮನೆ ಇರುತ್ತದೆ.

ಅರಣ್ಯ ಇಲಾಖೆ ಸಿಬ್ಬಂದಿ ಈ ಹುಲಿಗೆ ‘ಮಾಯಾರ್‌ ಕಿಂಗ್’‌ ಎಂದು ಹೆಸರು ಇಟ್ಟಿದ್ದಾರೆ. ‘ಮಾಯಾರ್‌ ಕಣಿವೆ ಭಾಗದಲ್ಲಿ ಹುಲಿ ಕಂಡು ಬಂದಿರುವುದರಿಂದ ಆ ಹೆಸರು ಇಡಲಾಗಿದೆ’ ಎಂದು ಟಿ.ಬಾಲಚಂದ್ರ ಅವರು ತಿಳಿಸಿದರು.

ಹಿಂದೆ ಬಂಡೀಪುರದಲ್ಲಿ ಪ್ರಿನ್ಸ್ ಎಂಬ ಹುಲಿ ಖ್ಯಾತಿ ಗಳಿಸಿತ್ತು. ಛಾಯಾಗ್ರಾಹಕರ ಅಚ್ಚುಮೆಚ್ಚಿನ ಹುಲಿಯಾಗಿತ್ತು. ಮೂರು ವರ್ಷಗಳ ಹಿಂದೆ ಅದು ಮೃತಪಟ್ಟಿತ್ತು. ಅದರ ಸ್ಥಾನವನ್ನು ‘ಮಾಯಾರ್‌ ಕಿಂಗ್‌’ ತುಂಬಲಿದ್ದಾನೆ ಎಂಬ ನಿರೀಕ್ಷೆಯಲ್ಲಿ ಅರಣ್ಯದ ಸಿಬ್ಬಂದಿ ಇದ್ದಾರೆ.

ಮದುಮಲೆ -ಮಸಿಣಗುಡಿ ರಸ್ತೆಯಲ್ಲಿ ಬದಿಯಲ್ಲೂ ಆಗಾಗ ಹುಲಿ ಕಾಣಿಸಿಕೊಳ್ಳುತ್ತಿದ್ದು,ಅನೇಕ ಭಾರಿ ಅರಣ್ಯ ಸಿಬ್ಬಂದಿ ಹಾಗೂ ಚಾಲಕರು ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT