ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ: ಮೂಲಭೂತ ದಾಖಲೆ ನೋಂದಣಿ ಅಭಿಯಾನ ಆರಂಭ

Published : 29 ಆಗಸ್ಟ್ 2024, 14:00 IST
Last Updated : 29 ಆಗಸ್ಟ್ 2024, 14:00 IST
ಫಾಲೋ ಮಾಡಿ
Comments

ಗುಂಡ್ಲುಪೇಟೆ: ತಾಲ್ಲೂಕಿನ ಮೇಲುಕಾಮನಹಳ್ಳಿ ಗಿರಿಜನರ ಹಾಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಬುಡಕಟ್ಟು ಸಮುದಾಯದವರಿಗೆ ಸರ್ಕಾರದ ಅಗತ್ಯ ಮೂಲಭೂತ ದಾಖಲೆಗಳ ನೋಂದಣಿ ಅಭಿಯಾನ ಆರಂಭಿಸಲಾಯಿತು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಬಿಂದ್ಯಾ ಹಾಡಿ ಮನೆಗಳಿಗೆ ಭೇಟಿ ನೀಡಿ, ಬುಡಕಟ್ಟು ಸಮುದಾಯಗಳಾದ ಜೇನು ಕುರುಬ, ಕಾಡು ಕುರುಬ ಸೇರಿದಂತೆ ಆದಿವಾಸಿಗಳಿಗೆ ದಾಖಲೆಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಆರೋಗ್ಯ ಕಾರ್ಡ್, ಆದಾಯ ಪ್ರಮಾಣ ಪತ್ರ ಮತ್ತು ಕಿಸಾನ್ ಸಮ್ಮಾನ್ ಪತ್ರಗಳ ನೋಂದಣಿ ಕಾರ್ಯಕ್ರಮವನ್ನು ಸರ್ಕಾರ ಅನುಷ್ಠಾನಗೊಳಿಸಿ ನಿಮ್ಮ ಮನೆ ಬಾಗಿಲಿಗೆ ಬಂದಿದೆ.  ಸಮುದಾಯದವರು ತಮಗೆ ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಅಧಿಕೃತವಾಗಿ ಸರ್ಕಾರ ನೀಡುವ ಗುರುತಿನ ಚೀಟಿ, ಪ್ರಮಾಣ ಪತ್ರ ಮತ್ತು ದಾಖಲೆಗಳು ಅಗತ್ಯವಾಗಿದ್ದು, ಪತ್ರಿಯೊಬ್ಬರೂ ಸರ್ಕಾರದ ದಾಖಲೆ ಪಡೆದುಕೊಳ್ಳುವಂತೆ ತಿಳಿ ಹೇಳಿದರು.

ಈ ಸಂಧರ್ಭದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಮೋಹನ್ ಕುಮಾರ್, ಸಿಬ್ಬಂದಿ ಶಿವನಾಗ, ಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT