ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಹೊಂದಿಕೊಂಡಿರುವ ಅಣೆಕಟ್ಟೆಗಳಲ್ಲಿ ಮಳೆ ಕೊರತೆಯಿಂದ ನೀರಿನ ಸಂಗ್ರಹ ತಳಮುಟ್ಟಿದೆ.

ಕೃಷ್ಣಯ್ಯನಕಟ್ಟೆ ಮತ್ತು ಹೊಸಹಳ್ಳಿ ಜಲಾವರ, ಬೆಲವತ್ತ ಡ್ಯಾಂನಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಬೇಸಿಗೆ ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಭತ್ತದ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದ್ದು ಕೃಷಿಕರಲ್ಲಿ ಆತಂಕ ತಂದಿತ್ತಿದೆ.

ಬೆಟ್ಟದ ಸುತ್ತ ಮುಂಗಾರು ಪೂರ್ವ ಮಳೆಯಿಂದ ಬಾಳೆ, ಕಬ್ಬು, ಭತ್ತ, ಅಡಿಕೆ, ತೆಂಗು ಮತ್ತು ಹಣ್ಣಿನ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಕೆಲ ಕೃಷಿಕರು ಬೆಲವತ್ತ ಆಣೆಕಟ್ಟೆ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿದ್ದಾರೆ.

ಪ್ರತಿವರ್ಷ ಬೇಸಿಗೆಯಲ್ಲಿ ಅಣೆಕಟ್ಟೆಯ ನೀರು ಬೆಳೆಗಳಿಗೆ ಬಳಕೆಯಾಗುತ್ತಿತ್ತು. ಆದರೆ, ಈ ಬಾರಿ ಅಣೆಕಟ್ಟೆಯ ತೂಬುಗಳನ್ನು ಸಕಾಲಕ್ಕೆ ದುರಸ್ತಿ ಮಾಡದೆ ನೀರು ಸೋರಿಕೆಯಾಗಿದೆ. ಕಾಳು ಕಟ್ಟುವ ಹಂತದಲ್ಲಿದ್ದ ಬೆಳೆಗಳಿಗೆ ನೀರಿನ ಅಭಾವ ಎದುರಾಗಿದೆ.

ಈ ಭಾಗದ ರೈತರು ನೂರಾರು ಎಕೆರೆಯಲ್ಲಿ ಎರಚು ಬಿತ್ತನೆ ವಿಧಾನದಲ್ಲಿ ಭತ್ತ ಬೆಳೆದಿದ್ದಾರೆ. 3 ತಿಂಗಳ ಕಾಲ ಅಣೆಕಟ್ಟೆಯಿಂದ ನೀರು ಹರಿಸಿದ್ದಾರೆ. ಭತ್ತ ಕಾಳು ಕಟ್ಟಿದ್ದು, 30 ದಿನಗಳಲ್ಲಿ ಕಟಾವಿಗೆ ಬರಲಿದೆ. ತಕ್ಷಣ ನೀರು ಕೊಡದಿದ್ದರೆ ಇಳುವರಿ ಸಂಪೂರ್ಣ ಕುಸಿಯಲಿದೆ. ಬೇಸಿಗೆ ಬೆಳೆ ಅರ್ಧ ಫಲಸು ಕೈಬಿಡಲಿದೆ ಎಂದು ಆತಂಕ ರೈತ ಹೊಂಗನೂರು ಯೋಗೇಶ್ ವ್ಯಕ್ತಪಡಿಸಿದರು .

ತೂಬಿನ ಕಳಪೆ ನಿರ್ವಹಣೆಯಿಂದ ಡ್ಯಾಂನಲ್ಲಿ ಸಂಗ್ರಹವಾಗಿದ್ದ ನೀರು ವ್ಯರ್ಥವಾಗಿ ಹರಿದಿದೆ. ಈಗ ರಿಪೇರಿ ಮಾಡಿದ್ದರೂ ಕಾಲುವೆಗೆ ಹರಿಸುವಷ್ಟು ನೀರಿಲ್ಲ ಎನ್ನುತ್ತಾರೆ ರೈತರು.

ಕೆಲವರು ಕೊಳವೆ ಬಾವಿ ಕೊರೆಸಿದ್ದರೂ ವಿದ್ಯುತ್ ಸಮಸ್ಯೆಯಿಂದ ನೀರು ಹರಿಸಲು ಸಾಧ್ಯವಾಗಿಲ್ಲ. ಹೆಚ್ಚು ನೀರು ಬೇಡುವ ಭತ್ತ ಮತ್ತು ಬಾಳೆಗಳಿಗೆ ಪಂಪ್ ಸೆಟ್ ನೀರು ಸಾಲುತ್ತಿಲ್ಲ. ಮಳೆ ಸುರಿದರೂ ಡ್ಯಾಂ ಸಂಪೂರ್ಣವಾಗಿ ತುಂಬುವ ಭರವಸೆ ಇಲ್ಲ. ನೀರಾವರಿ ಇಲಾಖೆ ಪ್ರತಿವರ್ಷ ಆಣೆಕಟ್ಟೆಗಳ ತೂಬುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಬೇಸಿಗೆ ಹಂಗಾಮಿನಲ್ಲಿ ಆರ್ಆರ್ ಮತ್ತು ಮಿನಿ ಲಾಂಗ್ ತಳಿಗಳನ್ನು ಎರಚು ಬಿತ್ತನೆ ಮಾದರಿಯಲ್ಲಿ ಕೃಷಿ ಮಾಡಿದ್ದೇವೆ. ಭತ್ತದ ಪೈರುಗಳು ಚೆನ್ನಾಗಿ ಬಂದಿವೆ. ಮುಂಗಾರು ಉತ್ತಮವಾದರೆ ಮಾತ್ರ ಡ್ಯಾಂ ತುಂಬಿ, ಮತ್ತೊಂದು ಬೆಳೆ ತೆಗೆಯಬಹುದು ಎಂದು ಕೃಷಿಕ ಬಸವರಾಜು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-37-1051898158

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.