ಮಂಗಳವಾರ, ಡಿಸೆಂಬರ್ 6, 2022
21 °C

ಚಾಮರಾಜನಗರ: ಪೇಸಿಎಂ ಟೀಶರ್ಟ್ ಧರಿಸಿದ್ದ ಪಾದಯಾತ್ರಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಪೇಸಿಎಂ ಎಂದು ಬರೆದಿರುವ ಟೀಶರ್ಟ್‌ ಧರಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತ ಅಕ್ಷಯ್‌ ಕುಮಾರ್‌ ಸಿಂದಗಿ ಎಂಬುವವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. 

ಶನಿವಾರ ಬೆಳಿಗ್ಗೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಿಂದ ಮೈಸೂರು ಜಿಲ್ಲೆಯತ್ತ ಹೊರಟಿದ್ದ ಪಾದಯಾತ್ರೆಯಲ್ಲಿ ಅಕ್ಷಯ್‌ ಕುಮಾರ್‌ ಹೆಜ್ಜೆ ಹಾಕುತ್ತಿದ್ದರು.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯವರಾದ ಅಕ್ಷಯ್‌ ಕುಮಾರ್‌ ಅವರು ಶುಕ್ರವಾರ ಗುಂಡ್ಲುಪೇಟೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಅವರು ಧರಿಸಿದ್ದ ಟೀಶರ್ಟ್‌ ಹಾಗೂ ಧ್ವಜ ಜನರ ಗಮನ ಸೆಳೆದಿತ್ತು.

ಅಕ್ಷಯ್ ವಿರುದ್ಧ ಗುಂಡ್ಲುಪೇಟೆಯ ಜಿ.ಎಸ್‌.ಕಿರಣ್‌ ಎಂಬುವವರು ಶುಕ್ರವಾರ ಚಾಮರಾಜನಗರ ಸಿಇಎನ್‌ ಅಪರಾಧ ಠಾಣೆಗೆ ದೂರು ನೀಡಿದ್ದರು. 

ಅದರ ಆಧಾರದಲ್ಲಿ ಶನಿವಾರ ಅಕ್ಷಯ್‌ ಅವರು ಬೇಗೂರಿನಿಂದ ಮೈಸೂರಿನತ್ತ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದು, ಟೀಶರ್ಟ್‌ ತೆಗೆಸಿ ವಶಕ್ಕೆ ಪಡೆದಿದ್ದಾರೆ.  

ಠಾಣೆ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು