ಗುರುವಾರ , ನವೆಂಬರ್ 21, 2019
24 °C

ಬಸ್‌ ಡಿಕ್ಕಿ: ಬೈಕ್‌ ಸವಾರ ಸಾವು

Published:
Updated:

ಚಾಮರಾಜನಗರ: ತಾಲ್ಲೂಕಿನ ಮಂಗಲ ಗ್ರಾಮದ ಬಳಿ ಖಾಸಗಿ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸವಾರ ಮೃತಪಟ್ಟಿದ್ದಾರೆ.

ನಗರದ ರೈಲ್ವೆ ಬಡಾವಣೆಯಲ್ಲಿರುವ ಆದಿಶಕ್ತಿ ದೇವಸ್ಥಾನ ಹಿಂಭಾಗದ ನಿವಾಸಿ ಪವನ್‌ರಾಜ್‌ (35) ಮೃತಪಟ್ಟವರು. ಇವರ ಪತ್ನಿ ಆಶಾರಾಣಿ (25) ಅವರ ಎಡ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪವನ್‌ರಾಜ್‌ ತಮ್ಮ ಪತ್ನಿ ಆಶಾರಾಣಿ ಅವರೊಂದಿಗೆ ಯಳಂದೂರಿಗೆ ಹೋಗಿ ವಾಪಸ್‌ ಆಗುತ್ತಿದ್ದಾಗ ಮಂಗಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಬಸ್‌ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಪವನ್‌ರಾಜ್‌ ಹಾಗೂ ಆಶಾರಾಣಿ ಬೈಕ್‌ನಿಂದ ಕೆಳಗೆ ಬಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪವನ್‌ರಾಜ್‌ ಸ್ಥಳದಲ್ಲೇ ಮೃತಪಟ್ಟರು.

ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)