ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜನ್ಮದಿಕ್ಕೆ ಚಾಮರಾಜನಗರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳು

ಬಿಜೆಪಿಯಿಂದ ಜಿಲ್ಲೆಯಾದ್ಯಂತ ಸೇವಾ ಸಪ್ತಾಹ
Last Updated 17 ಸೆಪ್ಟೆಂಬರ್ 2020, 13:20 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಸೇವಾ ಸಪ್ತಾಹದ ಅಡಿಯಲ್ಲಿ ಪಕ್ಷದ ವಿವಿಧ ಮೋರ್ಚಾಗಳು ಗುರುವಾರ ರಕ್ತದಾನ ಶಿಬಿರ, ಗಿಡ ನೆಡುವುದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.

ಬಿಜೆಪಿ ಜಿಲ್ಲಾ ಯುವ ಮೋರ್ಚಾವು ನಗರದ ನಂದಿ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿತ್ತು. 44 ಮಂದಿ ರಕ್ತದಾನ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್, ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಎಂ.ರಾಮಚಂದ್ರ ಅವರು ರಕ್ತದಾನ ಶಿಬಿರ ಉದ್ಘಾಟಿಸಿದರು.

ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯ ಕುಮಾರ್, ಲೋಕೇಶ್, ಉಪಾಧ್ಯಕ್ಷರಾದ ಮರಿಯಾಲ ಮಹೇಶ್, ವಿರಾಟ್ ಶಿವು, ನೆಲ್ಲೂರು ಮಹೇಶ್, ಮನು, ಕಾರ್ಯದರ್ಶಿಗಳಾದ ರಘು ಸೇರಿದಂತೆ 44 ಮಂದಿ ರಕ್ತದಾನ ಮಾಡಿದರು.

ಸ್ವಚ್ಛತಾ ಕಾರ್ಯ: ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾದ ವತಿಯಿಂದ ತಾಲ್ಲೂಕಿನ ಹರದನಹಳ್ಳಿ, ಅಮಚವಾಡಿ ಸರ್ಕಾರಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು, ನಂತರ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ರಾಮಚಂದ್ರ ಅವರು, ‘ಜಗತ್ತು ಕಂಡ ಅತ್ಯುತ್ತಮ, ಅಪ್ರತಿಮ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ, ಬಡವರು, ರೈತರು, ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರಿಗೆ ದೇವರು ಹೆಚ್ಚಿನ ಆರೋಗ್ಯ ಕರುಣಿಸಲಿ’ ಎಂದು ಆಶಿಸಿದರು.

ಗಿಡ ನೆಟ್ಟು ಆಚರಣೆ:ಒಬಿಸಿ ಮೋರ್ಚಾದ ವತಿಯಿಂದ ನಗರದ ನಂದಿ ಭವನದ ಆವರಣದಲ್ಲಿ ಸಸಿ ನೆಡಲಾಯಿತು.ಮೋರ್ಚಾದ ಟೌನ್ ಅಧ್ಯಕ್ಷ ನಂದೀಶ್ ಅವರು ಗಿಡ ನೆಟ್ಟರು.

ಕೇಕ್ ಕತ್ತರಿಸಿದ ದೃಷ್ಟಿದೋಷದ ಮಕ್ಕಳು:ಬಿಜೆಪಿ ಎಸ್‌ಸಿ ಮೋರ್ಚಾದ ವತಿಯಿಂದ ತಾಲ್ಲೂಕಿನ ಭೋಗಾಪುರ ದೀಪಾ ಅಕಾಡಮಿ ಫಾರ್ ದಿಫರೆಂಟ್ಲಿ ಏಬಲ್ಡ್‌ ಶಾಲೆಯಲ್ಲಿ ಸರಳ ಕಾರ್ಯಕ್ರಮ ಆಚರಿಸಲಾಯಿತು. ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ದೃಷ್ಟಿ ದೋಷಹೊಂದಿರುವ ಮಕ್ಕಳು ಕೇಕ್‌ ಕತ್ತರಿಸಿದರು.

ಕಾರ್ಯಕ್ರಮಗಳಲ್ಲಿಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್, ಉಪಾಧ್ಯಕ್ಷ ವೃಷಬೇಂದ್ರಪ್ಪ,ಕಾರ್ಯದರ್ಶಿ ಎಂಆರ್‌ಎಫ್ ಮಹೇಶ್, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಬಾಲರಾಜ್, ಪ್ರಧಾನ ಕಾರ್ಯದರ್ಶಿ ನಲ್ಲೂರು ಶ್ರೀನಾಥ್, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಜಯಸುಂದರ್,ಕಾರ್ಯದರ್ಶಿ ಬಸವಾಪುರ ಮಹೇಶ್,ಬಿಜೆಪಿ ಚಾಮರಾಜನಗರ ಮಂಡಲ ಅಧ್ಯಕ್ಷರಾದ ನಾಗರಾಜು, ಬಾಲಸುಬ್ರಹ್ಮಣ್ಯಂ, ಪೃಥ್ವಿರಾಜ್, ಮುಖಂಡರಾದ ಡಾ.ಎ.ಆರ್‌.ಬಾಬು,ಟೌನ್ ಪ್ರಧಾನ ಕಾರ್ಯದರ್ಶಿ ಮಹೇಶ್, ನಗರ ಘಟಕ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT