ಶನಿವಾರ, ಆಗಸ್ಟ್ 24, 2019
27 °C

ಪಟಾಕಿ ಸಿಡಿಸಿ ಬಿಜೆಪಿ ಸಂಭ್ರಮಾಚರಣೆ

Published:
Updated:
Prajavani

ಚಾಮರಾಜನಗರ: ಸಂಸ‌ತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಪ್ರಸ್ತಾವ ಅಂಗೀಕಾರವಾದ್ದರಿಂದ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು, ಸದಸ್ಯರು, ಮುಖಂಡರು ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪಕ್ಷ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಪರವಾಗಿ ಘೋಷಣೆ ಕೂಗಿ, ಪಟಾಕಿ ಸಿಡಿಸಿದರು. ಬಳಿಕ ಸಿಹಿ ವಿತರಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನೂರೊಂದು ಶೆಟ್ಟಿ, ನಾಗೇಂದ್ರಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ್, ಚಂದ್ರಶೇಖರ್, ನಗರಸಭಾ ಸದಸ್ಯರಾದ ಸುದರ್ಶನ ಗೌಡ, ಮನೋಜ್‌ ಪಟೇಲ್, ಚಂದ್ರಶೇಖರ್, ಮುಖಂಡರಾದ ಮಾರ್ಕೆಟ್‌ ಕುಮಾರ್, ಶಿವಮ್ಮ, ಮಂಗಳಮ್ಮ, ದೊರೆಸ್ವಾಮಿ, ಗಣೇಶ್ ಇದ್ದರು. 

Post Comments (+)