ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಸೋಮಣ್ಣಗೆ ಟಿಕೆಟ್ ನೀಡಿದರೆ ಮತದಾನ ಬಹಿಷ್ಕಾರ: ಎಚ್ಚರಿಕೆ

ಚುನಾವಣಾ ಉಸ್ತುವಾರಿ ವಹಿಸದಂತೆ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾಣ ಕಾರ್ಯದರ್ಶಿ ಶ್ರೀನಾಥ್ ಆಗ್ರಹ
Last Updated 27 ಮಾರ್ಚ್ 2023, 6:22 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಅಯ್ಯನಪುರ ಶಿವಕುಮಾರ್‌ ಅವರು ಸೋಮಣ್ಣ ಅವರಿಗೆ ಜಿಲ್ಲಾ ಚುನಾವಣಾ ಉಸ್ತುವಾರಿ ಹಾಗೂ ಜಿಲ್ಲೆಯಿಂದ ಟಿಕೆಟ್‌ ನೀಡುವುದಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ಇನ್ನೂ ಕೆಲವು ಮುಖಂಡರು ಸೋಮಣ್ಣ ಅವರ ನೇತೃತ್ವ ಹಾಗೂ ಜಿಲ್ಲೆಯಲ್ಲಿ ಟಿಕೆಟ್‌ ನೀಡುವುದನ್ನು ವಿರೋಧಿಸಿದ್ದಾರೆ. ಟಿಕೆಟ್‌ ಕೊಟ್ಟರೆ ಮತದಾನ ಬಹಿಷ್ಕಾರ ಹಾಕುವ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ, ಜ್ಯೋತಿಗೌಡನಪುರ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್‌, ‘ಜಿಲ್ಲಾಉಸ್ತುವಾರಿ ಸಚಿವ ಸೋಮಣ್ಣ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬಿಜೆಪಿ ವರಿಷ್ಠರು ಇವರಿಗೆ ಮೈಸೂರು, ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿ ವಹಿಸಬಾರದು, ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರೂ ಟಿಕೆಟ್ ನೀಡಬಾರದು’ ಎಂದು ಒತ್ತಾಯಿಸಿದರು.

‘ಜ್ಯೋತಿಗೌಡನಪುರ ಗ್ರಾಮಪಂಚಾಯಿತಿಗೆ 200 ಮನೆಗಳನ್ನು ನೀಡುವುದಾಗಿ ಭರವಸೆ ನೀಡಿ, 14 ಮನೆಗಳನ್ನು ಮಾತ್ರ ಮಂಜೂರು ಮಾಡಿದರು. ಹನೂರು ಕ್ಷೇತ್ರಕ್ಕೆ ಹೋದರೆ ಅಲ್ಲಿನ ಶಾಸಕ ನರೇಂದ್ರ ಅವರನ್ನು ಹೊಗಳುತ್ತಾರೆ. ಚಾಮರಾಜನಗರಕ್ಕೆ ಬಂದರೆ ಪುಟ್ಟರಂಗಶೆಟ್ಟಿ ಪರ ಮಾತಾಡುತ್ತಾರೆ. ಇವರ ಮೂಲ ಬಿಜೆಪಿಯದ್ದಾದರೂ, ಮನಃಸ್ಥಿತಿ ಸಂಪೂರ್ಣ ಕಾಂಗ್ರೆಸ್ ಮಯವಾಗಿದೆ’ ಎಂದು ದೂರಿದರು.

‘ಜಿಲ್ಲೆಯ ಮಹದೇಶ್ವರಬೆಟ್ಟದಲ್ಲಿ ಇದೇ 1ರಂದು ಬಿಜೆಪಿ ವಿಜಯಸಂಕಲ್ಪ ಅಭಿಯಾನಕ್ಕೆ ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರು ಚಾಲನೆ ನೀಡುವ ಸಂದರ್ಭದಲ್ಲಿ ಸೋಮಣ್ಣ ಭಾಗವಹಿಸಿರಲಿಲ್ಲ. ಇದನ್ನೆಲ್ಲ ಗಮನಿಸಿದರೆ ಬಿಜೆಪಿಗೆ ತಡೆಹಾಕಿ, ಕಾಂಗ್ರೆಸ್ ಬೆಂಬಲಿಸುವುದು ಇವರ ಎಂಬ ಉದ್ದೇಶ ಎಂದು ತೋರುತ್ತದೆ’ ಎಂದರು.

ಸೋಮಣ್ಣ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಒಂದೂವರೆ ವರ್ಷವಾಗುತ್ತಾ ಬಂದಿದೆ. ಈವರೆಗೂ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳ ಜತೆ ಅಭಿವೃದ್ದಿ ಪರಚಿಂತನೆ ಸಭೆ ನಡೆಸಿಲ್ಲ. ಆಶ್ವಾಸನೆ ನೀಡುತ್ತಾರೆಯೇ ವಿನಾ ಈಡೇರಿಸುವ ಕಾಳಜಿ ಇವರಿಗೆ ಇಲ್ಲ. ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ನೀಡಿದಲ್ಲಿ ಪಕ್ಷ ತೊರೆಯುವುದಿಲ್ಲ. ಬದಲಾಗಿ ಮತದಾನ ಬಹಿಷ್ಕರಿಸುತ್ತೇವೆ’ ಎಂದರು.

ಮುಖಂಡರಾದ ಬಸವಯ್ಯ, ಮೋಹನ್, ನಾಗಮಲ್ಲೇಶ್, ಪುಟ್ಟಸ್ವಾಮಿ, ಚಿಕ್ಕಸ್ವಾಮಿ, ನಿಂಗನಾಯಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT