ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಜನಾಂದೋಲನಕ್ಕೆ ಬಸ್‌: ಪ್ರಯಾಣಿಕರ ಪರದಾಟ

Published 9 ಆಗಸ್ಟ್ 2024, 16:50 IST
Last Updated 9 ಆಗಸ್ಟ್ 2024, 16:50 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‌ ಜನಾಂದೋಲನ ಸಮಾವೇಶಕ್ಕೆ ಚಾಮರಾಜನಗರದಿಂದ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಟ್ಟಿದ್ದರಿಂದ ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವವರು ಬಸ್‌ ಸಿಗದೆ ಪರದಾಡಿದರು.

ಬೆಳಿಗ್ಗೆ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೈಸೂರು ಮಾರ್ಗ ಹೊರತಾಗಿ ಇತರ ಮಾರ್ಗಗಳಿಗೆ ಸಮರ್ಪಕ ಬಸ್‌ಗಳ ಸೌಲಭ್ಯ ಇರಲಿಲ್ಲ. ನಗರದಿಂದ ಇತರ ತಾಲ್ಲೂಕುಗಳಿಗೆ ಹಾಗೂ ಬೆಂಗಳೂರು ಕಡೆಗೆ ತೆರಳಬೇಕಾದ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಶಿಕ್ಷಕರು ತೀವ್ರ ಸಮಸ್ಯೆ ಎದುರಿಸಿದರು. ನಿಲ್ದಾಣದ ತುಂಬ ಪ್ರಯಾಣಿಕರು ಜಮಾಯಿಸಿದ್ದು ಕಂಡುಬಂತು.

ಅಪರೂಪಕ್ಕೆ ಬಂದು ಹೋಗುತ್ತಿದ್ದ ಬಸ್‌ಗಳನ್ನು ಹತ್ತಲು ಪ್ರಯಾಣಕರು ಮುಗಿಬೀಳುತ್ತಿದ್ದರು. ಪರಿಣಾಮ ವೃದ್ಧರು, ಮಹಿಳೆಯರು, ಮಕ್ಕಳು ಸಮಸ್ಯೆ ಅನುಭವಿಸಿದರು. ಚಾಮರಾಜನಗರದಿಂದ 100ಕ್ಕೂ ಹೆಚ್ಚು ಬಸ್‌ಗಳನ್ನು ಮೈಸೂರು ಕಡೆಗೆ ಬಿಟ್ಟಿರುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಬಸ್‌ ಚಾಲಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT