ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಬದುಕಿಗೆ ಜಾನುವಾರು ಸಾಕಣೆಯೇ ಆಧಾರ

ಹನೂರು: ಗೊಬ್ಬರ ಮಾರಾಟದ ಲಾಭ ದಲ್ಲಾಳಿಗಳ ಪಾಲು, ಮಾರುಕಟ್ಟೆ ವ್ಯವಸ್ಥೆಗೆ ಆಗ್ರಹ
Last Updated 8 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹನೂರು: ಅದು ಕರ್ನಾಟಕಮತ್ತುತಮಿಳುನಾಡು ಗಡಿಯ ಭಾಗ. ದಟ್ಟಾರಣ್ಯದಿಂದಲೇಕೂಡಿರುವಅಲ್ಲಿವ್ಯವಸಾಯ ಅಷ್ಟಕಷ್ಟೇ.ಸರಿಯಾಗಿಮಳೆಯಾಗದೇಇರುವುದರಿಂದಕೂಲಿ ಕೆಲಸವೂ ಇಲ್ಲ. ಈ ಭಾಗದ ಬಹುಪಾಲು ಜನರಿಗೆ ಜಾನುವಾರುಗಳೇ ಜೀವನಾಧಾರ. ಅವುಗಳ ಸಗಣಿ/ಗೊಬ್ಬರ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.

ತಾಲ್ಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಾರಳ್ಳಿ, ಗಾಜನೂರು, ಕೊಪ್ಪ, ದೊರೆದೊಡ್ಡಿ, ದಿನ್ನಳ್ಳಿ, ಮಿಣ್ಯಂ, ಹೂಗ್ಯಂ, ಕೂಡ್ಲೂರು, ನೆಲ್ಲೂರು, ಜಲ್ಲಿಪಾಳ್ಯ, ಹಂಚಿಪಾಳ್ಯ ಹಾಗೂ ಮಾರ್ಟಳ್ಳಿ ಭಾಗದ ಹಲವು ಗ್ರಾಮಗಳ ಸಾವಿರಾರು ಕುಟುಂಬಗಳಿಗೆ ಆದಾಯದ ಮೂಲವಾಗಿರುವುದು ಜಾನುವಾರುಗಳು. ‌40ರಿಂದ 100ರಷ್ಟು ದನಕರುಗಳನ್ನು ಸಾಕುವವರು ಇಲ್ಲಿದ್ದಾರೆ.

ಇಲ್ಲಿನವರು ಸಾಕುತ್ತಿರುವುದು ಬಹುತೇಕ ಎಲ್ಲವೂ ದೇಸಿ ಬರಗೂರು ತಳಿಯ ಹಸುಗಳು. ಸ್ಥಳೀಯವಾದ ಹಳ್ಳಿಕಾರ್‌ ದನಕರುಗಳು ಇವೆ. ಇತ್ತೀಚೆಗೆ ಒಂದಿಲ್ಲೊಂದು ವಿದೇಶಿ ತಳಿ ಹಸುಗಳೂ ಕಂಡು ಬರುತ್ತಿವೆ. ಇವುಗಳ ಗೊಬ್ಬರದ ಮಾರಾಟದಿಂದ ಬರುವ ಹಣ ಇವರ ಆದಾಯ. ದಲ್ಲಾಳಿಗಳ ಕಾಟ ಇವರ ಆದಾಯಕ್ಕೆ ಕತ್ತರಿ ಹಾಕುತ್ತಿವೆ.

ಲೋಡು ಗೊಬ್ಬರಕ್ಕೆ ₹14 ಸಾವಿರ–₹15 ಸಾವಿರ ನೀಡಿ ಖರೀದಿಸುವ ವ್ಯಾಪಾರಿಗಳು ಕೇರಳ, ಶಿವಮೊಗ್ಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ₹30 ಸಾವಿರ–₹35 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಮೂಲ ಕಸುಬು: ಮಲೆ ಮಹದೇಶ್ವರವನ್ಯಧಾಮದ ವ್ಯಾಪ್ತಿಗೆ ಬರುವ ಈ ಕಾಡಂಚಿನ ಗ್ರಾಮಗಳ ಜನರ ಮೂಲ ಕಸುಬೇ ಜಾನುವಾರು ಸಾಕಣೆ. ಹಗಲು ಹೊತ್ತಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡುವ ಗ್ರಾಮಸ್ಥರು, ರಾತ್ರಿ ಹೊತ್ತು ಮನೆಯ ಬಳಿ ಕಟ್ಟಿ ಹಾಕುತ್ತಾರೆ. ಅವುಗಳು ಹಾಕುವ ಸಗಣಿಯನ್ನು ಸಂಗ್ರಹಿಸಿಡುತ್ತಾರೆ. ಹಲವು ಲೋಡುಗಳಷ್ಟು ಸಗಣಿ/ಗೊಬ್ಬರ ಸಂಗ್ರಹವಾದಾಗ, ಮನೆಯ ಬಳಿಗೆ ಬರುವ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.

ಮೇವು ಕಷ್ಟ: ಕೆಲವು ವರ್ಷಗಳ ಹಿಂದಿನವರೆಗೆ ಸುತ್ತಮುತ್ತಲಿನ ಅರಣ್ಯ ಸಂಪತ್ತೇ ಜಾನುವಾರುಗಳಿಗೆ ಆಹಾರದ ಮೂಲವಾಗಿತ್ತು. 2013ರಲ್ಲಿ ಮಲೆ ಮಹದೇಶ್ವರ ವನ್ಯಧಾಮ ಎಂದು ಘೋಷಣೆಯಾದ ಬಳಿಕ ಜಾನುವಾರುಗಳನ್ನು ಕಾಡಿಗೆ ಮೇಯಲು ಬಿಡುವುದನ್ನು ನಿಷೇಧಿಸಲಾಗಿದೆ. ಆ ಬಳಿಕ ಜಾನುವಾರುಗಳ ಸಾಕಣೆ ಕಷ್ಟವಾಗಿದೆ. ಹಾಗಿದ್ದರೂ, ಹೇಗೋ ಕಸುಬವನ್ನು ಮುಂದುವರಿಸಿದ್ದಾರೆ.

ಇತ್ತೀಚೆಗೆ ಜಮೀನು ಇರುವವರು ವ್ಯವಸಾಯವನ್ನೂ ಮಾಡುತ್ತಿದ್ದಾರೆ. ಸಾಕುವ ಜಾನುವಾರುಗಳಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಕೃಷಿಗೆ ಬಳಸುತ್ತಿದ್ದಾರೆ. ಮಿಕ್ಕಿ ಉಳಿದುದನ್ನು ಮಾರಾಟ ಮಾಡುತ್ತಿದ್ದಾರೆ.

‘ಬಹುತೇಕಅರಣ್ಯದಿಂದಲೇಕೂಡಿರುವಇಲ್ಲಿನಗ್ರಾಮಗಳಜನರಿಗೆಕೃಷಿಭೂಮಿಯಿದ್ದರೂ ಜಾನುವಾರುಸಾಕಾಣಿಕೆಗೆ ಆದ್ಯತೆನೀಡುತ್ತಿದ್ದೇವೆ. ವಾರ್ಷಿಕಮಳೆಯಪ್ರಮಾಣಕಡಿಮೆಇರುವುದರಿಂದಹಾಕಿದ ಬೆಳೆಯೂನಿರೀಕ್ಷಿತ ಪ್ರಮಾಣದಲ್ಲಿಕೈಸೇರುವುದಿಲ್ಲ. ಹೀಗಾಗಿಮಳೆಗಾಲದಸಂದರ್ಭದಲ್ಲಿಕೃಷಿಮಾಡುವುದರಜೊತೆಗೆ ಜಾನುವಾರುಗಳ ಸಾಕಾಣಿಕೆ ಮಾಡುತ್ತಿರುವುದರಿಂದ ಜೀವನ ಹೇಗೋ ಸಾಗಿದೆ’ ಎಂದು ನೆಲ್ಲೂರು ಗ್ರಾಮದ ಶ್ರೀನಿವಾಸ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೊಬ್ಬರಕ್ಕಾಗಿ ಜಾನುವಾರುಗಳನ್ನು ಸಾಕುತ್ತೇವೆ. ಪ್ರತಿಮನೆಯಲ್ಲೂಕೊಟ್ಟಿಗೆನಿರ್ಮಿಸಿ ಗೊಬ್ಬರ ಸಂಗ್ರಹಿಸುತ್ತಾರೆ. ವರ್ಷಕ್ಕೊಮ್ಮೆಮಾರಾಟಮಾಡುತ್ತಾರೆ.ಇದರಿಂದ ಉತ್ತಮ ಆದಾಯ ಸಿಗುತ್ತದೆ. ಆದರೆಇವರಿಂದ ಅಲ್ಪಬೆಲೆಗೆ ಗೊಬ್ಬರ ಕೊಂಡೊಯ್ಯುವದಲ್ಲಾಳಿಗಳುಅದನ್ನುಮಲೆನಾಡು,ಕೇರಳಕ್ಕೆ ತೆಗೆದುಕೊಂಡು ಹೋಗಿ ದುಪ್ಪಟ್ಟು ಬೆಲೆಗೆಮಾರಾಟಮಾಡುತ್ತಿರುವುದರಿಂದಇಲ್ಲಿನರೈತರಿಗೆಅನ್ಯಾಯವಾಗುತ್ತಿದೆ’ ಎಂದುಮಿಣ್ಯಂ ಗ್ರಾಮದ ಮಾದೇವ ಅವರು ಹೇಳಿದರು.

"ಗೊಬ್ಬರಮಾರಾಟಕ್ಕಾಗಿ ಮಾರುಕಟ್ಟೆವ್ಯವಸ್ಥೆಕಲ್ಪಿಸಿಕೊಟ್ಟರೆ ಇಲ್ಲಿನನೂರಾರು ಕುಟುಂಬಗಳ ಆರ್ಥಿಕ ಸ್ಥಿತಿ ಇನ್ನಷ್ಟು ಬಲಗೊಳ್ಳಲಿದೆ’ ಎಂದು ಹೇಳುತ್ತಾರೆ ಇಲ್ಲಿನ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT