ಶನಿವಾರ, ಮಾರ್ಚ್ 6, 2021
31 °C

ಚಾಮರಾಜನಗರ: ಸಾಲ ಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಲ್ಲೂಕಿನ  ರೈತರೊಬ್ಬರು ಗುರುವಾರ ರಾತ್ರಿ ಬೆಂಡರವಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಬಾಧೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಚಂದಕವಾಡಿಯ ನಿವಾಸಿ ಸಿದ್ಧಲಿಂಗಸ್ವಾಮಿ (55) ಆತ್ಮಹತ್ಯೆ ಮಾಡಿಕೊಂಡವರು. ಬ್ಯಾಂಕು ಹಾಗೂ ಹಲವು ಕಡೆಗಳಲ್ಲಿ ಅವರು ಕೈ ಸಾಲ ಮಾಡಿದ್ದರು ಎಂದು ಗೊತ್ತಾಗಿದೆ. ಶುಕ್ರವಾರ ಕೈಸಾಲ ನೀಡಿದ್ದವರಿಗೆ ಹಣ ವಾಪಸ್ ಕೊಡಬೇಕಿತ್ತು.

ಗುರುವಾರ ರಾತ್ರಿ ಚಾಮರಾಜನಗರದಿಂದ ಬೆಂಡರವಾಡಿವರೆಗೆ ಕೆಎಸ್‌ಆರ್‌ಟಿಸಿ‌ ಬಸ್‌ನಲ್ಲಿ ತೆರಳಿದ್ದ ಅವರು, ಕೆರೆಯ ದಡದ ಮೇಲೆ ಬಟ್ಟೆಗಳನ್ನು ತೆಗೆದಿಟ್ಟು ನೀರಿಗೆ ಹಾರಿದ್ದಾರೆ. 

ಬೆಳಿಗ್ಗೆ ಬಟ್ಟೆಗಳನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಳುಗು ತಜ್ಞರು ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.

'ಸಿದ್ಧಲಿಂಗಸ್ವಾಮಿ ಅವರು ಹಲವು ಕಡೆ ಸಾಲ ಮಾಡಿದ್ದರು. ಸಾಲ ಪಾವತಿಸಲು ಸಾಧ್ಯವಾಗದೆ ಮನನೊಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು