ಭಾನುವಾರ, ಜೂನ್ 20, 2021
21 °C

ಚಾಮರಾಜನಗರ ಜಿಲ್ಲಾ ಕೋವಿಡ್ ಅಂಕಿ ಅಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ಸತತ 2ನೇ ದಿನವಾದ ಗುರುವಾರವೂ 500 ರ ಗಡಿ ದಾಟಿದೆ. ಬುಧವಾರ 576 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಗುರುವಾರ 539 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 1,500 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಬುಧವಾರ ಸಂಜೆ 6 ಗಂಟೆಯಿಂದ ಗುರುವಾರ ಸಂಜೆ 6 ಗಂಟೆಯವರೆಗೆ ಒಟ್ಟು 16 ಮಂದಿ  ರೋಗಿಗಳು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ 7  ಮಂದಿ ಇತರೆ ಕಾರಣಗಳಿಂದ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಗುರುವಾರ 385  ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇವಲ 336 ಮಂದಿಯನ್ನು ಹೋಂಐಸೋಲೇಷನ್‌ಗೆ ಕಳುಹಿಸಲಾಗಿದೆ. ಒಟ್ಟು 2,228 ಮಂದಿ ಹೋಂ ಐಸೋಲೇಷನ್‌ಲ್ಲಿಯೇ ಇದ್ದಾರೆ. 51 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸ ಸೋಂಕಿತರ ಪೈಕಿ 113 ಮಂದಿ ಮಾತ್ರವೇ ಪಟ್ಟಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ 426  ಮಂದಿ ವಿವಿಧ ಹಳ್ಳಿಗಳಿಗೆ ಸೇರಿದವರೇ ಆಗಿದ್ದಾರೆ. ಇವರಲ್ಲಿ 29 ಮಂದಿ ಮಕ್ಕಳೂ ಇದ್ದಾರೆ.

ಚಾಮರಾಜನಗರ ತಾಲ್ಲೂಕಿನಲ್ಲಿ 165, ಕೊಳ್ಳೇಗಾಲದಲ್ಲಿ 140, ಹನೂರಿನಲ್ಲಿ 100, ಗುಂಡ್ಲುಪೇಟೆಯಲ್ಲಿ 97, ಯಳಂದೂರಿನಲ್ಲಿ 27 ಹಾಗೂ ಹೊರ ಜಿಲ್ಲೆಯ 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬುಧವಾರ ಮೃತಪಟ್ಟವರ ವಿವರಗಳು:

ಆರೋಗ್ಯ ಇಲಾಖೆಯು ಬುಧವಾರ ಮೃತಪಟ್ಟ 5 ಮಂದಿಯ ವಿವರಗಳನ್ನು ಬಹಿರಂಗಪಡಿಸಿದೆ. ಆದರೆ, ಗುರುವಾರ ಮೃತಪಟ್ಟವರ ಮಾಹಿತಿ ನೀಡಿಲ್ಲ

ಚಾಮರಾಜನಗರ ತಾಲ್ಲೂಕು ಮರಿಯಾಲ ಗ್ರಾಮದ 67 ವರ್ಷದ ಪುರುಷ, ಮಾದಾಪುರ ಗ್ರಾಮದ 47 ವರ್ಷದ ಪುರುಷ, ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದ 80 ವರ್ಷದ ಪುರುಷ, ಹನೂರು ತಾಲ್ಲೂಕಿನ 52 ವರ್ಷದ ಪುರುಷ, ತಾಳವಾಡಿಯ ಈರೋಡ್‌ನ 80 ವರ್ಷದ ಪುರುಷ ಮೃತರಲ್ಲಿ ಸೇರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.