ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಎಣ್ಣೆ ಅಭ್ಯಂಜನ ಮಾಡಿ ಶ್ರದ್ಧಾಭಕ್ತಿಯಿಂದ ದೇವರನ್ನು ಪೂಜಿಸಿ ಬೇವು–ಬೆಲ್ಲ ಸವಿಯಲಾಯಿತು. ಬಳಿಕ ಹೋಳಿಗೆ, ಪಾಯಸ ಸಹಿತ ತರಹೇವಾರಿ ಭೋಜನದ ಸವಿ ಸವಿದು ಹಬ್ಬವನ್ನು ಸಂಭ್ರಮಿಸಲಾಯಿತು.

ಮನೆಗಳ ಬಾಗಿಲಿಗೆ ಮಾವು, ಬೇವು, ಹೂವಿನ ತಳಿರು ತೋರಣ ಕಟ್ಟಲಾಗಿತ್ತು, ಬಂಧು–ಬಾಂಧವರು, ಹಿತೈಷಿಗಳ ಹಾಜರಿ ಎದ್ದು ಕಾಣುತ್ತಿತ್ತು. ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಒಂದು ಮಾರು ಸೇವಂತಿಗೆ ಹಾಗೂ ಏಲಕ್ಕಿ ಬಾಳೆ ಕೆ.ಜಿಗೆ ₹ 100 ದಾಟಿದರೂ ಖರೀದಿ ಉತ್ಸಾಹ ಕುಂದಿರಲಿಲ್ಲ.

ಸೇಬು, ಕಿತ್ತಳೆ, ದಾಳಿಂಬೆ, ಸಪೋಟ, ವೀಳ್ಯೆದೆಲೆ, ಅಡಿಕೆ, ಅರಿಶಿನ, ಕುಂಕುಮ ಸೇರಿದಂತೆ ಹಬ್ಬಕ್ಕೆ ಬೇಕಾದ ಹಣ್ಣುಗಳ ಖರೀದಿ ನಡೆಯಿತು. ಹೂ, ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆ ಗ್ರಾಹಕರಿಂದ ಗಿಜಿಗಿಡುತ್ತಿತ್ತು.

ಮನೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕುಟುಂಬ ಸಮೇತ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದ ಸಾರ್ವಜನಿಕರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನ, ಗುರು ರಾಘವೇಂದ್ರ ಸ್ವಾಮಿ ಹಾಗೂ ಸಾಯಿಬಾಬಾ ದೇಗುಲಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು.

ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಯುಗಾದಿ ಹಬ್ಬವನ್ನು ಗ್ರಾಮಾಂತರ ಭಾಗಗಗಳಲ್ಲಿ ಹೊನ್ನೇರು ಕಟ್ಟಿ ವಿಶೇಷವಾಗಿ ಆಚರಿಸಲಾಯಿತು. ಚಾಮರಾಜನಗರ, ಹೆಬ್ಬಸೂರು, ಹೊನ್ನೂರು, ಬೊಮ್ಮಲಾಪುರ, ಹಂಗಳ ಮುಂತಾದ ಗ್ರಾಮಗಳ ಮುಂಜಾನೆ ಎತ್ತುಗಳ ಮೈತೊಳೆದು ಅಲಂಕಾರ ಮಾಡಿ, ಮಾವಿನ ಸೊಪ್ಪು, ಬಾಳೆ ಕಂದುಗಳಿಂದ ಸಿಂಗಾರಗೊಂಡಿದ್ದ ಎತ್ತಿನಗಾಡಿಯಲ್ಲಿ ಗೊಬ್ಬರ ಇರಿಸಿ ಹೊನ್ನೇರು ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಗ್ರಾಮದ ಯಜಮಾನರು, ಗ್ರಾಮಸ್ಥರು ಹೊನ್ನೇರಿಗೆ ವಿಶೇಷ ಪೂಜೆ ಸಲ್ಲಿಸಿ ಹಣ್ಣು ಕಾಯಿ ನೈವೇದ್ಯ ಮಾಡಿ ಗ್ರಾಮಗಳ ಬೀದಿಗಳಲ್ಲಿ ಹೊನ್ನೇರು ಕಟ್ಟಿದ ಗಾಡಿಗಳನ್ನು ಮೆರವಣಿಗೆ ನಡೆಸಿದರು. ಹಾದಿ ಮಧ್ಯೆ ಹೊನ್ನೇರು ಕಟ್ಟಿದ ಎತ್ತಿನಗಾಡಿಗಳಿಗೆ ಅಲ್ಲಲ್ಲಿ ಪೂಜೆ ಮಾಡಿದ ಗ್ರಾಮಸ್ಥರು ಊರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ದೇವಸ್ಥಾನದ ಮುಂದೆ ಹೊನ್ನೇರು ಕಟ್ಟಿದ ಎತ್ತಿನ ಗಾಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಜಮೀನುಗಳಿಗೆ ತೆರಳಿ ಗೊಬ್ಬರವ ಜಮೀನಿಗೆ ಹರಡಿ ಸಮೃದ್ಧ ಬೆಳೆಯಾಗಲಿ, ರೋಗಬಾಧೆಗಳು ಕಾಡದಿರಲಿ ಎಂದು ಪ್ರಾರ್ಥಿಸಲಾಯಿತು.

‘ಗ್ರಾಮಕ್ಕೆ ಒಳಿತಾಗಲಿ ಪ್ರಾರ್ಥನೆ’

ಹೆಬ್ಬಸೂರು ಗ್ರಾಮದಲ್ಲಿ ಹೊನ್ನೇರು ಕಟ್ಟುವ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಗ್ರಾಮಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಹೊನ್ನೇರು ಕಟ್ಟಿದ ಎತ್ತಿನಗಾಡಿಯನ್ನು ಜಮೀನುಗಳಿಗೆ ತೆಗೆದುಕೊಂಡು ಹೋಗಿ ಅದರಲ್ಲಿ ತುಂಬಿರುವ ಗೊಬ್ಬರವನ್ನು ಕೃಷಿಭೂಮಿಗೆ ಎರಚಿದರೆ ಒಳ್ಳೆಯ ಫಸಲು ಲಾಭ ದೊರೆಯುತ್ತದೆ ಎಂಬುದು ನಂಬಿಕೆ ಎನ್ನುತ್ತಾರೆ ಗೌಡಿಕೆ ಮಂದೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.