ಚಾಮರಾಜನಗರ: ತಾಲ್ಲೂಕಿನ ಬೊಕ್ಕೆಪುರ ಗ್ರಾಮದಲ್ಲಿರುವ ರಾಗಿಕಲ್ಲು ವೈದ್ಯಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪೂಜೆಗೆ ಅವಕಾಶ ನೀಡಬೇಕು ಹಾಗೂ ಗೋಮಾಳ ಉಳಿಸಬೇಕು ಎಂದು ದೇವಸ್ಥಾನ ಸಮಿತಿಯ ಹರೀಶ್ ಕುಮಾರ್ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೊಕ್ಕೆಪುರ ಗೋಮಾಳ ಉಳಿವಿಗೆ ಹಾಗೂ ರಾಗಿಕಲ್ಲು ವೈದ್ಯಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪೂಜೆಗೆ ಅವಕಾಶ ಕೋರಿ 12 ವರ್ಷಗಳಿಂದ ಒತ್ತಾಯ ಮಾಡಲಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಗೋಮಾಳದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು ಸರ್ಕಾರಿ ಭೂಮಿ ಕಬಳಿಕೆ ಮಾಡಲಾಗಿದೆ ಎಂದರು.

ಆರಂಭದಲ್ಲಿ 635 ಎಕರೆ ಇದ್ದ ಗೋಮಾಳ 242 ಎಕರೆಗೆ ಕಡಿಮೆಯಾಗಿದೆ. ನೂರಾರು ಎಕರೆ ಸರ್ಕಾರಿ ಭೂಮಿ ಕಬಳಿಸಲಾಗಿದ್ದರೂ ಕ್ರಮ ಜರುಗಿಸಿಲ್ಲ ಎಂದು ಒತ್ತಾಯಿಸಿದರು.

ಗೋಮಾಳ ಜಾಗದಲ್ಲಿರುವ ರಾಗಿಕಲ್ಲು ಗುಡ್ಡೆಯಲ್ಲಿ ಉದ್ಭವ ಶಿವಲಿಂಗವಿದ್ದು ಪೂಜೆ ನಡೆಯುತ್ತದೆ. ಹಿಂದೆ 10 ಗ್ರಾಮಗಳ ಗೋವುಗಳು ಮೇವಿಗೆ ಹಾಗೂ ಕುಡಿಯುವ ನೀರಿಗೆ ಗೋಮಾಳ ಬಳಕೆಯಾಗುತ್ತಿತ್ತು. ಗಣಿಗಾರಿಕೆಗೆ ಅವಕಾಶ ಕೊಟ್ಟ ಮೇಲೆ ಭೂಮಿ ಒತ್ತುವರಿಯಾಗಿದೆ. ದೇವಸ್ಥಾನದಲ್ಲಿ ಅಷ್ಟಮಂಗಲ ಪೂಜೆಗೆ ಅವಕಾಶ ಕಲ್ಲಿಸಿಕೊಡಬೇಕು, ಗೋಮಾಳ ಉಳಿಸಬೇಕು, ಇಲ್ಲದಿದ್ದರೆ ಜಿಲ್ಲಾಡಳಿತ ಮುಂಭಾಗ ಅನಿರ್ದಿಷ್ಟಾವಧಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೋಹನ್ರಾಜ್, ಶಿವಮಲ್ಲು ಗಿರಿಮಲ್ಲು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-37-607353808

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.