ಹನೂರು/ಚಾಮರಾಜನಗರ: ನಗರದಲ್ಲಿ ಸೋಮವಾರ ಮಧ್ಯಾಹ್ನ ಕೆಲಕಾಲ ಬಿರುಸಿನ ಮಳೆ ಸುರಿಯಿತು. ಬೆಳಿಗ್ಗಿನಿಂದ ಬಿಸಿಯಾಗಿದ್ದ ವಾತಾವರಣ ಮಧ್ಯಾಹ್ನದ ಹೊತ್ತಿಗೆ ತಂಪಾಗಿ ನೋಡ ನೋಡುತ್ತಿದ್ದಂತೆ ಬಿಸಿಲು ಮರೆಯಾಗಿ ಕತ್ತಲು ಕವಿದಂತಹ ವಾತಾವರಣ ನಿರ್ಮಾಣವಾಯಿತು. ದಟ್ಟವಾದ ಮೋಡ ಆವರಿಸಿಕೊಂಡು ಅರ್ಧ ತಾಸು ಮಳೆ ಸುರಿಯಿತು.

ನಗರದ ಸತ್ತಿ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆಯ ತಗ್ಗಿನ ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಚರಂಡಿಯೊಳಗೆ ತುಂಬಿದ್ದ ತ್ಯಾಜ್ಯ ರಸ್ತೆಗೆ ಹರಿದು ಜನ ಸಂಚಾರಕ್ಕೆ ಸಮಸ್ಯೆಯಾಯಿತು. ಬುದ್ಧನಗರ, ಪ್ರಗತಿನಗರ ಸಹಿತ ಹಲವೆಡೆ ಚರಂಡಿಯ ನೀರು ರಸ್ತೆಗೆ ಹರಿದು ನಾಗರಿಕರು ಕಿರಿಕಿರಿ ಅನುಭವಿಸಿದರು.

ಹನೂರಿನಲ್ಲಿ ಭಾರಿ ಮಳೆ: ಬಿಸಿಲ ಬೇಗೆ, ಕುಡಿಯುವ ನೀರಿನ ಸಮಸ್ಯೆಯಿಂದ ಹೈರಾಣಾಗಿದ್ದ ಜನತೆ ಕೊನೆಗೂ ಸೋಮವಾರ ಸುರಿದ ಮಳೆಗೆ ನಿಟ್ಟುಸಿರು ಬಿಟ್ಟರು. ಈ ವರ್ಷದ ಮೊದಲ ದೊಡ್ಡ ಮಳೆ ತಾಲ್ಲೂಕಿನಾದ್ಯಂತ ಹರ್ಷದ ವಾತಾವರಣ ನಿರ್ಮಾಣ ಮಾಡಿತು. ಮಳೆ ಕೊರತೆಯಿಂದ ಒಣಗಿ ಬರಡಾಗಿದ್ದ ಹಳ್ಳ–ಕೊಳ್ಳಗಳು ತುಂಬಿ ಹರಿದವು.

ತಾಲ್ಲೂಕಿನ ಮಾರ್ಟಳ್ಳಿ, ಮೀಣ್ಯಂ, ದೊಡ್ಡಾನೆ ಹಾಗೂ ಲೊಕ್ಕನಹಳ್ಳಿ ಭಾಗದಲ್ಲಿ ಜೋರು ಮಳೆಯಾಗಿದ್ದು ಸ್ಥಳೀಯ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹೊಲ–ಗದ್ದೆಗಳು, ಕೆರೆ ಕಟ್ಟೆಗಳಿಗೆ ನೀರು ಹರಿದಿದ್ದು ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಂತಾಗಿದೆ.

ಬಿರುಸಿನ ಮಳೆಗೆ ಹಾಲರವಿ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಬಂದಿದೆ, ಪಾಲಿಮೇಡು ಗ್ರಾಮದ ಕೆಲವು ಬಡಾವಣೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡಚಣೆ ಉಂಟಾಯಿತು.

ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಚೆಕ್ ಡ್ಯಾಮ್ಗಳು ಸಂಪೂರ್ಣ ಭರ್ತಿಯಾಗಿದ್ದು ನೀರು ಹೊರಗೆ ಹರಿಯುತ್ತಿದೆ. ಚೆಕ್ಡ್ಯಾಮ್ಗಳು ತುಂಬಿರುವ ಹಿನ್ನೆಲೆಯಲ್ಲಿ ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಗಂಭೀರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ತಾಲ್ಲೂಕಿನ ಜನತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕೈ ಮುಗಿದು ನಮಸ್ಕರಿಸಿದ ರೈತ: ಮಳೆ ಇಲ್ಲದೆ ಆಗಸ ನೋಡುತ್ತಿದ್ದ ರೈತನ ಪ್ರಾರ್ಥನೆ ಫಲಿಸಿದ್ದರಿಂದ ರೈತರು ಮಳೆರಾಯನಿಗೆ ಕೈಮುಗಿದು ಪ್ರಾರ್ಥಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವಣ್ಣ ಭಕ್ತಿಯಿಂದ ವರುಣನಿಗೆ ಕೃತಜ್ಞತೆ ಅರ್ಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಕೆಎಸ್ ದೊಡ್ಡಿ ಗ್ರಾಮದಲ್ಲಿ ಕೆರೆ ತುಂಬಿರುವುದರಿಂದ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.

ಮಾರ್ಟಳ್ಳಿ ಗ್ರಾಮದಲ್ಲಿ ಸುರಿದ ಬಿರುಸು ಮಳೆ ಕೃಷಿಚಟುವಟಿಕೆಗಳಿಗೆ ಪೂರಕವಾಗಿದ್ದು, ರೈತರು ಸಂತಸವಾಗಿದ್ದರೆ ಮತ್ತೊಂದೆಡೆ ರಸ್ತೆಗಳು ಹಾಳಾಗಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-37-712801908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.