ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಜಾಲತಾಣಗಳಲ್ಲಿ ‘ಚಿರತೆ ವಿಡಿಯೊ’

Published 31 ಜುಲೈ 2023, 7:19 IST
Last Updated 31 ಜುಲೈ 2023, 7:19 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ್ದ ಚಿರತೆ, ಅಂತಿಮವಾಗಿ ಕುಂತೂರು ಗುಡ್ಡವನ್ನು ಆವಾಸ ಮಾಡಿಕೊಂಡಿದೆ. ಭಾನುವಾರ ಪರಿಸರ ಪ್ರಿಯರು ಚಿರತೆ ಬಂಡೆ ಮೇಲೆ ಇರುವ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

‘ಅರಣ್ಯ ವನ್ಯಜೀವಿ ವಲಯದ ವನಪಾಲಕರು ಗುಡ್ಡ ಸುತ್ತುವರಿದಿದ್ದು, ಚಿರತೆ ತಪ್ಪಿಸಿಕೊಳ್ಳದಂತೆ ತಂತ್ರ ರೂಪಿಸಿದ್ದಾರೆ. ಭಾನುವಾರ ಮಧ್ಯಾಹ್ನ ಚಿರತೆ ಗುಡ್ಡದ ಬಂಡೆ ಏರಿರುವುದನ್ನು ಖಚಿತಪಡಿಸಿರುವ ಅಧಿಕಾರಿಗಳು, ಸಾರ್ವಜನಿಕರು ಚಿರತೆ ವಿಡಿಯೊ ಚಿತ್ರೀಕರಿಸಿ ಸ್ನೇಹಿತರ ವಾಟ್ಸ್‌‌‌ಆ್ಯಪ್‌‌ಗಳಲ್ಲಿ ಹಂಚಿಕೊಂಡಿದ್ದಾರೆ’ ಎಂದು ತಿಳಿಸಿದರು.

'ಚಿರತೆ ಬಲಿ ಪ್ರಾಣಿ ಮೇಲೆ ದಾಳಿ ಮಾಡುವಂತೆ ಯೋಜನೆ ರೂಪಿಸಲಾಗಿದೆ. ಈ ಸಮಯದಲ್ಲಿ ವನ್ಯಜೀವಿ ತಜ್ಞರು ಅರಿವಳಿಕೆ ಮದ್ದು ಪ್ರಯೋಗಿಸಲಿದ್ದಾರೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಧು ಹೇಳಿದರು.

‘ಗುಡ್ಡದ ಸುತ್ತಮುತ್ತ ಜನರು ಗುಂಪುಗೂಡುವುದನ್ನು ನಿಲ್ಲಿಸಬೇಕು. ಸೆಲ್ಫಿ ಇಲ್ಲವೇ ವೀಡಿಯೊ ಮಾಡುವ ಸಾಹಸ ಮಾಡಬಾರದು. ಚಿರತೆ ಸದಾ ಚಟುವಟಿಕೆಯಿಂದ ಇರುವುದರಿಂದ ದಾಳಿ ಮಾಡುವ ಸಾಧ್ಯತೆ ಇದೆ. ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ಜೊತೆ ನಾಗರಿಕರು ಸಹಕರಿಸಬೇಕು’ ಎಂದು ಆರ್‌‌‌ಎಫ್ಒ ಲೋಕೇಶ್ ಮೂರ್ತಿ ತಿಳಿಸಿದರು.

ವದಂತಿಗೆ ನೌಕರರು ಸುಸ್ತು!

ತಾಲ್ಲೂಕಿನ ಕೆಸ್ತೂರು, ಮಲ್ಲಿಗೆಹಳ್ಳಿ ಸುತ್ತಮುತ್ತ ಚಿರತೆ ಬಗ್ಗೆ ವದಂತಿ ಹಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾತ್ರಿ ನಾಯಿ ಸಂಚರಿಸಿದರೂ ಚಿರತೆ ಎಂದು ವನ ಪಾಲಕರಿಗೆ ಪೋನ್ ಮಾಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಇದರಿಂದ ಚಿರತೆ ಬೀಡುಬಿಟ್ಟ ಸ್ಥಳದಿಂದ ಸಿಬ್ಬಂದಿ ಅಲೆಯುವಂತಾಗಿದೆ. ಹಾಗಾಗಿ, ಗ್ರಾಮಸ್ಥರು ವದಂತಿಗೆ ಕಿವಿಕೊಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT