ಚಾಮರಾಜನಗರ: ಕವಿತೆ, ಕಾದಂಬರಿಗಳ ಬರವಣಿಗೆ ಸಮಾಜದ ಸಾಮಾಜಿಕ ಸ್ವಾಸ್ಥ್ಯವನ್ನು ವೃದ್ಧಿಸುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಚಾಮರಾಜನಗರ ಲೇಖಕರ ಸಂಘ, ರೋಟರಿ ಸಂಸ್ಥೆ ಮತ್ತು ರಂಗತರಂಗ ಟ್ರಸ್ಟ್ ವತಿಯಿಂದ ನಗರದ ರೋಟರಿ ಭವನದಲ್ಲಿ ಭಾನುವಾರ ನಡೆದ ‘ಹೂದೋಟ’ ಕವನ ಸಂಕಲನ ಬಿಡುಗಡೆ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಕವಿತೆ ಬರೆಯುವುದು ಕ್ಲಿಷ್ಟಕರ ಎನಿಸಿದರೂ ಲೇಖಕರು ಕವಿತೆ ರಚಿಸುವ ಮೂಲಕವೇ ಸಾಹಿತ್ಯ ಲೋಕ ಪ್ರವೇಶಿಸುವುದೇ ಹೆಚ್ಚು. ಕವಿಗಳ ಭಾವನೆ, ಸಂವೇದನೆಗಳು ಅಕ್ಷರರೂಪದ ಪಡೆದು ಸಾಹಿತ್ಯ ಕೃತಿಯಾಗುತ್ತವೆ. ಹೂದೋಟ ಕೃತಿಯಲ್ಲಿ ಘಮಿಸುವ ಅರಳಿದ ಕಾವ್ಯ ಕುಸುಮಗಳು ಇವೆ ಎಂದರು.

ಕೃತಿ ಕುರಿತು ಸಾಹಿತಿ ಡಾ.ಪ್ರಭು ಬಿಸ್ಲೇಹಳ್ಳಿ ಮಾತನಾಡಿ ‘ಹೂದೋಟ ಸಂಕಲನದ ಶೀರ್ಷಿಕೆ ಅರ್ಥವತ್ತಾಗಿದ್ದು ಐವತ್ತು ಕವಿತೆಗಳೂ ಭಿನ್ನ ಮನಸ್ಸು, ವಿಭಿನ್ನ ಚಿಂತನೆಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿವೆ. ಮೂಡ್ನಾಕೂಡು ಚಿನ್ನಸ್ವಾಮಿ, ಸಿ.ನಾಗಣ್ಣ, ಮಹದೇವ ಶಂಕನಪುರ ಅವರ ಪದ್ಯಗಳು, ಕೆ.ಎನ್.ಕಾವ್ಯ, ಕಿರಣ್ ಗಿರ್ಗಿ, ರವಿಚಂದ್ರ ಕಹಳೆ ಅವರ ಕವಿತೆಗಳು ಸಂಕಲನದಲ್ಲಿವೆ ಎಂದರು.

ಸಾಹಿತಿ ಕೆ.ವೆಂಕಟರಾಜು, ಕೃತಿ ಸಂಪಾದಕ ಮದ್ದೂರು ದೊರೆಸ್ವಾಮಿ, ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಸಂಶೋಧನಾರ್ಥಿ ಪ್ರಸಾದ್ ಅರಳೀಪುರ, ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕಿಯರಾದ ಕವಯತ್ರಿ ಶೀಲಾ ಸತ್ಯೇಂದ್ರ ಸ್ವಾಮಿ, ಶಿಕ್ಷಕಿ ವಿ.ಮಂಜುಳಾ, ಡಾ.ಪಿ.ಪ್ರೇಮ ವೈ.ಕೆ.ಮೋಳೆ ಮತ್ತು ಕಲಾವಿದೆ ಎನ್.ಧನಲಕ್ಷ್ಮಿ ಅವರನ್ನು ವಿಮರ್ಶಕಿ ಡಾ.ತ್ರಿವೇಣಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕೆಸ್ತೂರು ಮಂಜುನಾಥ್, ಅಂಬಳೆ ಸಿದ್ದರಾಜು, ಜನಶಕ್ತಿ ಸುರೇಶ್, ಸಿದ್ದಲಿಂಗ ಸ್ವಾಮಿ ಹೊಂಗನೂರು, ಆಸಿಮ, ಕಾಳಿಂಗಸ್ವಾಮಿ ಸಿದ್ದಾರ್ಥ್, ಗು.ಚಿ.ರಮೇಶ, ನಂಜರಾಜು ಹೊಂಗನೂರು, ಕಮಾಂಡೆಂಟ್ ಮಹಾಲಿಂಗಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.