ಚಾಮರಾಜನಗರ: ನಗರದ ರಾಮಸಮುದ್ರ ಬಡಾವಣೆಯ ತಿಬ್ಬಳ್ಳಿ ಕಟ್ಟೆಯ ಬಳಿ ಇರುವ ಗ್ರಾಮದೇವತೆ ತಿಬ್ಬಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ಕೊಂಡೋತ್ಸವ, ಮಡೆ ಉತ್ಸವ, ತಂಪೋತ್ಸವ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಹೋಮ, ವಿಶೇಷ ಪೂಜೆಗಳು ನಡೆದವು. ಮಾರಮ್ಮ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ, ತೋರಣಗಳಿಂದ ಅಲಂಕರಿಸಲಾಗಿತ್ತು. ಹರಕೆ ಹೊತ್ತ ಭಕ್ತರು ಮಡೆ ಸೇವೆ ಸಲ್ಲಿಸಿದರು. ಭಕ್ತರು ಮಾರಮ್ಮ ದರ್ಶನ ಪಡೆದರು. ದೇವಸ್ಥಾನದ ಮುಂಭಾಗದಲ್ಲಿ ನಡೆದ ಕೊಂಡಕ್ಕೆ ಪೂಜೆ ಸಲ್ಲಿಸಲಾಯಿತು.

ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದೇವತೆ ತಿಬ್ಬಳ್ಳಿ ಮಾರಮ್ಮ ಹಬ್ಬ ನಡೆಯಿತು. ದೇವಸ್ಥಾನದಲ್ಲಿ ಕೊಂಡೋತ್ಸವ ನಡೆದರೂ ಭಕ್ತರು ಕೊಂಡ ಹಾಯುವುದಿಲ್ಲ; ಬದಲಾಗಿ ಸಂಪ್ರದಾಯದಂತೆ ಪೂಜೆ ನಡೆಯಿತು ಎಂದು ಯಜಮಾನರಾದ ನಾಗರಾಜು ತಿಳಿಸಿದರು.

ಯಜಮಾನರಾದ ಪಾಪಣ್ಣ, ಆಂಜನೇಯ, ರೇವಣ್ಣ, ಚಂದ್ರಪ್ಪ, ಸಿದ್ದರಾಜು, ಚನ್ನಂಜಯ್ಯ, ಡಿ.ನಂಜಪ್ಪ, ಪ್ರಸನ್ನ, ಜಿ.ರಾಜಪ್ಪ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.