ಚಾಮರಾಜನಗರ: ವಿವಿಧ ಗ್ರಾಮಗಳಲ್ಲಿ ₹2.40 ಕೋಟಿ ವೆಚ್ಚದಡಿ ನಿರ್ಮಿಸಲಾಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುರುವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಅನುದಾನದಡಿ ಯಡಿಯೂರು ಗ್ರಾಮಕ್ಕೆ ₹50 ಲಕ್ಷ, ಯಲಕ್ಕೂರು, ಕರಡಿಮೋಳೆ, ಸಪ್ಪಯ್ಯನಪುರ ಸಂಪರ್ಕ ರಸ್ತೆಗೆ ₹50 ಲಕ್ಷ, ಗುಂಡ್ಲುಪೇಟೆ ಮುಖ್ಯ ರಸ್ತೆಯಿಂದ ಮಲ್ಲಯ್ಯನಪುರ ಆರ್ಟಿಒ ಕಚೇರಿ ಸಂಪರ್ಕ ರಸ್ತೆಗೆ ₹70 ಲಕ್ಷ, ಗುಂಡ್ಲುಪೇಟೆ ಮುಖ್ಯ ರಸ್ತೆಯಿಂದಕಡುವಿನಕಟ್ಟೆಹುಂಡಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹70 ಲಕ್ಷ ಮಂಜೂರಾಗಿದೆ.

‘ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ಧರಾಗಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ, ಆಶ್ರಯ ಮನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರ್ಕಾರ ಮಂಜೂರು ಮಾಡುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

ಮುಖಂಡ ಎಸ್ಪಿಕೆ ಉಮೇಶ್, ಸೋಮಣ್ಣೇಗೌಡ, ಕುಮಾರ್, ಮಹದೇವಸ್ವಾಮಿ, ನಾಗರಾಜು, ನಟರಾಜು, ಸುಬ್ಬೇಗೌಡ, ಪ್ರಕಾಶ್, ಶಿವಣ್ಣ, ಮಂಜು, ಅರುಣ್, ಮಹದೇವಪ್ರಸಾದ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-37-1043146354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.