ಚಾಮರಾಜನಗರ: ಪ್ರಾಣಿ-ಪಕ್ಷಿಗಳ ಉಳಿವಿಗೆ ಪೂರಕ ಪರಿಸರ ನಿರ್ಮಾಣ ಮಾಡಬೇಕಿರುವುದು ಮನುಷ್ಯನ ಕರ್ತವ್ಯ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹೇಳಿದರು.

ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಅಮಚವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗುಬ್ಬಚ್ಚಿ ದಿನದಲ್ಲಿ ಮಾತನಾಡಿ, ಗುಬ್ಬಚ್ಚಿ ವಿಶಿಷ್ಟ ಪಕ್ಷಿಯಾಗಿದ್ದು ಪರಿಸರವನ್ನು ಶುದ್ಧಗೊಳಿಸುವ ಕಾರ್ಯ ಮಾಡುತ್ತವೆ. ಮಾನವ ಮತ್ತು ಪ್ರಕೃತಿ ಅನ್ಯೋನ್ಯತೆಯಿಂದ ಇರಲು ಪಕ್ಷಿಗಳ ಕಾರ್ಯ ಮಹತ್ತರವಾದದ್ದು. ಪಕ್ಷಿ ಸಂಕುಲವನ್ನು ಉಳಿಸಿ ಬೆಳೆಸಲು ಮನೆಯ ಆವರಣದಲ್ಲಿ ಕಾಳು ಹಾಗೂ ನೀರು ಇರಿಸಬೇಕು.

ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಪ್ರಾಣಿ–ಪಕ್ಷಿಗಳನ್ನು ಪ್ರೀತಿಸುವುದು ರಕ್ತಗತವಾಗಿ ಬಂದಿರುವ ಗುಣವಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ಮಾನವ ಬದಲಾವಣೆಯ ದಿಕ್ಕಿನಲ್ಲಿ ಸಾಗುತ್ತಿದ್ದರೂ ಪ್ರಾಣಿ ಪಕ್ಷಿಗಳ ಮೇಲಿನ ಕಾಳಜಿ ಮರೆಯಬಾರದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಗುಂಡ್ಲುಪೇಟೆ ಬಸವಣ್ಣ ಮಾತನಾಡಿ ವಿಶ್ವ ಗುಬ್ಬಚ್ಚಿ ದಿನ ಜಾಗೃತಿಯ ದಿನವಾಗಿ ಆಚರಿಸಬೇಕು. ಗುಬ್ಬಚ್ಚಿ ಗಾತ್ರದಲ್ಲಿ ಚಿಕ್ಕದಾದರೂ ವಿಶಿಷ್ಟ ಪಕ್ಷಿಯಾಗಿದ್ದು ಸಾಮೂಹಿಕ ಅನ್ಯೋನ್ಯತೆಯ ಜೀವನ ಶೈಲಿಯ ಮಹತ್ವವನ್ನು ಸಾರುತ್ತದೆ. ಈಚೆಗೆ ಗುಬ್ಬಚ್ಚಿ ಸಂಕುಲ ಕಣ್ಮರೆಯಾಗುತ್ತಿರುವುದು ಕಳವಳಕಾರಿ ವಿಚಾರವಾಗಿದ್ದು ಗುಬ್ಬಚ್ಚಿಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು.

ಮರ ಗಿಡಗಳನ್ನು ಬೆಳೆಸುವ ಹಾಗೂ ಬೇಸಿಗೆ ಸಂದರ್ಭ ಆಹಾರ ನೀರಿನ ಕೊರತೆ ಎದುರಾಗದಂತೆ ಮನೆಯ ಅಂಗಳದಲ್ಲಿ ಕಾಳು ಮತ್ತು ನೀರನ್ನು ಇರಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ಕೊಳ್ಳೇಗಾಲ ರಮೇಶ್ ಮಾತನಾಡಿರು. ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ, ಕೊಂಗಳಪ್ಪ, ಸುನಿಲ್, ಪ್ರಕಾಶ್, ಉಮೇಶ್, ಮಂಜು ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.