ಗುಂಡ್ಲುಪೇಟೆ: ಚಾಮರಾಜನಗರ ತಾಲ್ಲೂಕಿನ 3ನೇ ಹಂತದ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅರಲಕವಾಡಿ, ಅಮಚವಾಡಿ, ಕಿಲಗೆರೆ, ಯರಗನಹಳ್ಳಿ ಸುತ್ತಲಿನ ಗ್ರಾಮಸ್ಥರು ತಾಲ್ಲೂಕಿನ ಹುತ್ತೂರು ಕೆರೆಯ ಪಂಪ್ ಹೌಸ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅರಲಕವಾಡಿ, ಅಮಚವಾಡಿ, ಕಿಲಗೆರೆ, ಯರಗನಹಳ್ಳಿ, ಕೊತ್ತಲವಾಡಿ, ಯಣಗುಂಬ ಪ್ರದೇಶಗಳ ರೈತರು ಹಾಗೂ ಗ್ರಾಮಸ್ಥರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಕೂಗಿದರು.

ಪ್ರತಿಭಟನಾನಿರತರು ಮಾತನಾಡಿ, ‘ಚಾಮರಾಜನಗರ ತಾಲ್ಲೂಕಿನ 3ನೇ ಹಂತದ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಅರಲಕವಾಡಿ, ಅಮಚವಾಡಿ, ಕಿಲಗೆರೆ, ಯರಗನಹಳ್ಳಿ, ಕೊತ್ತಲವಾಡಿ, ಯಣಗುಂಬ ಭಾಗದ ರೈತರಿಗೆ ನೀರಿನ ಸಮಸ್ಯೆ ಉಂಟಾಗಿದೆ. ಕೆರೆಗಳು ಬರಿದಾಗಿದ್ದು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕೆರೆ, ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದೆ, ಅಂತರ್ಜಲ ಮಟ್ಟ ಕುಸಿದಿದೆ. ಬೆಳೆಗಳು ಸಂಪೂರ್ಣ ಹಾಳಾಗಿದೆ’ ಎಂದು ಆಕ್ರೋಶ ಹೊರ ಹಾಕಿದರು.

ಚಾಮರಾಜನಗರ ತಾಲ್ಲೂಕಿನ 3ನೇ ಹಂತದ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 4ನೇ ಹಂತದ ಕೆರೆಗಳಿಗೆ ಸಮನಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ರೂಪಿಸಲಾಗವುದು ಎಂದು ಎಚ್ಚರಿಸಿದರು.

ಧರಣಿ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಎಇಇ ಮಹೇಶ್ ಬಂದು ಪ್ರತಿನಾಕಾರರ ಸಮಸ್ಯೆ ಆಲಿಸಿ, ಬುಧವಾರದಿಂದ 3ನೇ ಮತ್ತು 4ನೇ ಹಂತದ ಕೆರೆಗಳಿಗೆ ಸಮನಾಗಿ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕೊತ್ತಲವಾಡಿ ಮಂಜು, ಕಿಲಗೆರೆ ರಾಮು, ಅಮಚವಾಡಿ ಮಹೇಂದ್ರ, ಮಹೇಶ್ ಸೇರಿದಂತೆ 50ಕ್ಕೂ ಅಧಿಕ ಮಂದಿ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-37-262079200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.