ಚಾಮರಾಜನಗರ: ಜಿಲ್ಲೆಯಲ್ಲಿ ಈಚೆಗೆ ಸುರಿದ ಬಿರುಗಾಳಿ ಸಹಿತ ಮಳೆಯು ಬಾಳೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಬೆಲೆ ಕುಸಿತ, ಇಳುವರಿ ನಷ್ಟ, ಆರ್ಥಿಕ ಸವಾಲುಗಳು ನಡುವೆ ವರ್ಷಪೂರ್ತಿ ಕಷ್ಟಪಟ್ಟು ಜೋಪಾನ ಮಾಡಿಕೊಂಡು ಬಂದಿದ್ದ ಬಾಳೆ ಕಟಾವಿಗೂ ಮುನ್ನವೇ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ನೆಲಕಚ್ಚಿದೆ. ಇದರ ಜೊತೆಗೆ ರೈತರ ಬದುಕೂ ಹಳಿ ತಪ್ಪಿದಂತಾಗಿದೆ.

ತೋಟಗಾರಿಕಾ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಈಚೆಗೆ ಸುರಿದ ಗಾಳಿ ಮಳೆಗೆ ಜಿಲ್ಲೆಯಲ್ಲಿ 168 ಹೆಕ್ಟೇರ್ ಅಂದರೆ 414 ಎಕರೆಯಷ್ಟು ಬಾಳೆ ನಾಶವಾಗಿದೆ. ಪ್ರಾಥಮಿಕ ಹಂತದಲ್ಲಿ ಹಾನಿ ಅಂದಾಜು ಮಾಡಲಾಗಿದ್ದು ಕಂದಾಯ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಇನ್ನೆರಡು ದಿನಗಳಲ್ಲಿ ಸಂಪೂರ್ಣ ಹಾನಿಯ ವಿವರ ಕಲೆ ಹಾಕಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಿವಪ್ರಸಾದ್ ತಿಳಿಸಿದ್ದಾರೆ.

ಎಲ್ಲೆಲ್ಲಿ ಹೆಚ್ಚು ಹಾನಿ: ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದಲ್ಲಿ ಹೆಚ್ಚು ಬಾಳೆ ನಾಶವಾಗಿದೆ. ಹಂಗಳ ಗ್ರಾಮವೊಂದರಲ್ಲೇ 225 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಧರೆಗುರುಳಿದೆ. ಉಳಿದಂತೆ ಗುಂಡ್ಲುಪೇಟೆ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ 113 ಎಕರೆ, ತೆರಕಣಾಂಬಿ ಹೋಬಳಿಯಲ್ಲಿ 73 ಎಕರೆ, ಹನೂರು ತಾಲ್ಲೂಕಿನ ಮೀಣ್ಯಂ ಭಾಗದಲ್ಲಿ 40 ಎಕರೆಯಷ್ಟು ಬಾಳೆ ಬೆಳೆ ಹಾಳಾಗಿದೆ.

ಮರುಗಿದ ರೈತರು: ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಜಿಲ್ಲೆಯಲ್ಲಿ ಬಾಳೆ ಬೆಳೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವರ್ಷಪೂರ್ತಿ ಆರೈಕೆ ಮಾಡಿದ ಬಾಳೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸುರಿಯುವ ಬಿರುಗಾಳಿ ಸಹಿತ ಮಳೆಗೆ ಸಿಲುಕುತ್ತಿದ್ದು ಸಾವಿರಾರು ಎಕರೆ ನಾಶವಾಗುತ್ತಿದೆ. ಪೂರ್ವ ಮುಂಗಾರು ಅವಧಿಯಲ್ಲಿ ಮಳೆ ಅಬ್ಬರಕ್ಕಿಂತ ಗಾಳಿಯ ಆರ್ಭಟ ಹೆಚ್ಚಾಗಿರುವುದು ಬಾಳೆ ಬೆಳೆಗೆ ಕುತ್ತಾಗಿ ಪರಿಣಮಿಸಿದೆ ಎನ್ನುತ್ತಾರೆ ರೈತರು.

ಸಾಮಾನ್ಯವಾಗಿ ಪೂರ್ವ ಮುಂಗಾರು ಸುರಿಯುವ ಹೊತ್ತಿಗೆ ಬಾಳೆ ಗೊನೆಗಳು ಕಟಾವು ಹಂತಕ್ಕೆ ಬಂದಿರುತ್ತವೆ. ಮಾರುಕಟ್ಟೆಯಲ್ಲಿ ದರಗಳ ಏರಿಳಿತ ನೋಡಿಕೊಂಡು ಕಟಾವಿಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ಬಿರುಗಾಳಿ ಬೀಸಿ ಬಾಳೆ ಬೆಳೆಯನ್ನು ಅಪೋಷನ ತೆಗೆದುಕೊಳ್ಳುತ್ತಿದೆ. ಬೆಳೆಗಾರರ ಬದುಕನ್ನೂ ಬೀದಿಗೆ ದೂಡುತ್ತಿದೆ ಎನ್ನುತ್ತಾರೆ ಪ್ರಗತಿಪರ ರೈತ ಹಾಗೂ ಶ್ರಮಸಂಜಾತ ರೈತ ಉತ್ಪನ್ನಗಳ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ನಾಗಾರ್ಜುನ ಕುಮಾರ್.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಕೆರೆ ಕಟ್ಟೆಗಳು ತುಂಬದ ಪರಿಣಾಮ ಬಾಳೆ ಬೆಳೆ ಉಳಿಸಿಕೊಳ್ಳಲು ರೈತರು ಪಡಿಪಾಟಲು ಪಟ್ಟಿದ್ದರು. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಇಳಿಕೆಯಾದಾಗಲೂ ಪರ್ಯಾಯ ಮೂಲಗಳಿಂದ ನೀರು ಕೊಟ್ಟು ಬೆಳೆ ಉಳಿಸಿಕೊಂಡಿದ್ದರು. ನಿರಂತರ ಸವಾಲುಗಳನ್ನು ಎದುರಿಸಿಯೂ ಕೊನೆಗೆ ಹವಾಮಾನ ವೈಪರೀತ್ಯದ ಮುಂದೆ ನಿಸ್ಸಾಹಯಕರಾಗಿದ್ದಾರೆ.

ದರ ಇಳಿಕೆ: ಗಾಳಿ ಮಳೆಗೆ ಬಾಳೆಯ ಗಿಡ ಧರೆಗುರುಳುತ್ತಿದ್ದಂತೆ ಬಾಳೆಯ ದರವೂ ಇಳಿಕೆಯಾಗುತ್ತದೆ. ಗೊನೆ ಬಲಿತು ಕಟಾವಿಗೆ ಬಂದಿದ್ದರೂ ಪರಿಸ್ಥಿತಿಯ ಲಾಭ ಪಡೆಯುವ ದಲ್ಲಾಳಿಗಳು ಹಾಗೂ ವ್ಯಾಪಾರಿಗಳು ಮನಸ್ಸಿಗೆ ಬಂದ ದರ ನಿಗದಿಪಡಿಸುತ್ತಾರೆ. ಬಿದ್ದ ಗೊನೆಗಳನ್ನು ಇರಿಸಿಕೊಳ್ಳಲೂ ಆಗದೆ ವ್ಯಾಪಾರಿಗಳು ಕೇಳಿದ ಬೆಲೆಗೆ ರೈತರು ಮಾರಾಟ ಮಾಡುತ್ತಾರೆ.

ಬಿಡಿಗಾಸು ಪರಿಹಾರ ಸಾಲದು: ಒಂದು ಎಕರೆ ಬಾಳೆ ಬೆಳೆಯಲು ₹ 1 ಲಕ್ಷದವರೆಗೆ ಖರ್ಚು ಬರುತ್ತದೆ. ಆದರೆ ಬಾಳೆ ನಾಶವಾದರೆ ರಾಜ್ಯ ಸರ್ಕಾರ ಎಕರೆಗೆ ಕೇವಲ ₹ 6,000 ಬಿಡಿಗಾಸು ಪರಿಹಾರ ನೀಡುತ್ತಿದ್ದು ಜಮೀನಿನ ಉಳುಮೆಗೂ ಸಾಲುವುದಿಲ್ಲ. ಲಾಭದ ಮಾತಿರಲಿ, ಬೆಳೆಯಲು ಖರ್ಚು ಮಾಡಿದಷ್ಟಾದರೂ ಪರಿಹಾರ ನೀಡಿದರೆ ರೈತರು ಪರ್ಯಾಯ ಬೆಳೆ ಬೆಳೆಯಲು ಮುಂದಾಗುತ್ತಾರೆ. ಸಾಲದ ಹೊರೆಯಿಂದಲೂ ಪಾರಾಗುತ್ತಾರೆ ಎಂದು ಸಲಹೆ ನೀಡುತ್ತಾರೆ ರೈತ ನಾಗಾರ್ಜುನ ಕುಮಾರ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-37-1016959196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.