ಸಂತೇಮರಹಳ್ಳಿ: ಸಮೀಪದ ಕಮರವಾಡಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.

ಸಂತೇಮರಹಳ್ಳಿ ಪಿಎಸ್ಐ ಮೋಹನ್ ಕುಮಾರ್ ಮಾತನಾಡಿ, ಭಾರತ ದೇಶಕ್ಕೆ ಪ್ರಪಂಚದಲ್ಲಿಯೆ ಅತ್ಯುತ್ತಮ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಶ್ರೇಷ್ಠ, ಮಹಾನ್ ನಾಯಕರಾಗಿದ್ದಾರೆ. ಇದು ಭಾರತದ ಹೆಮ್ಮೆಯ ವಿಷಯವೂ ಆಗಿದೆ. ದೇಶದಲ್ಲಿ ಹಲವಾರು ಧರ್ಮ, ಜಾತಿ ವ್ಯವಸ್ಥೆಯ ನಡುವೆಯು ಜನರು ಅನ್ಯೂನತೆಯಿಂದ ಜೀವನ ನಡೆಸುತ್ತಿದ್ದು, ಇದಕ್ಕೆ ಕಾರಣ ಸಂವಿಧಾನ. ಶೋಷಿತರು ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಅರ್ಥಿಕವಾಗಿ ಮುಂದೆ ಬರಲು ಸಂವಿಧಾನ ಸಹಕಾರಿಯಾಗಿದೆ ಎಂದು ತಿಳಿಸಿದರು.

ಶಿಕ್ಷಕ ರಾಜಪ್ಪ ಮೌರ್ಯ ಮಾತನಾಡಿ, ಪುಸ್ತಕಗಳನ್ನು ಅನುಸರಣೆ ಮಾಡಿ ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಮೌಢ್ಯ, ಅಜ್ಞಾನವನ್ನು ತೊರೆದು ದೇಶದ ಪ್ರತಿಯೊಬ್ಬ ಪ್ರಜೆಯು ಶಿಕ್ಷಣವಂತರಾದಾಗ ದೇಶದ ಅಭಿವೃದ್ಧಿ ಸಾಧ್ಯ. ಮಹಾನ್ ನಾಯಕನನ್ನು ನಮ್ಮ ದೇಶದಲ್ಲಿ ಜಾತಿಗೆ ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಹಿಂದೂಕೋಡ್ ಬಿಲ್ ಮೂಲಕ ಮಹಿಳೆಯರ ವಿಮೋಚನೆಗೆ ಕಾರಣರಾದ ಅಂಬೇಡ್ಕರ್ ಅವರನ್ನು ಮಹಿಳೆಯರು ಸದಾ ಸ್ಮರಿಸಬೇಕಾಗಿದೆ ಎಂದು ತಿಳಿಸಿದರು.

ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮುಖಂಡರಾದ ಬಸವರಾಜು, ಮಹದೇವಯ್ಯ, ಶಿವಣ್ಣ, ನಾಗರಾಜು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-37-1228376783

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.