ಚಾಮರಾಜನಗರ: ತಾಲ್ಲೂಕಿನ ಉಡಿಗಾಲದ ಆನೆಮಡುವಿನ ಕೆರೆಗೆ ಚಿಕ್ಕಮೋರಿ ಕಾಲುವೆ ಮೂಲಕ ನೀರು ತುಂಬಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಉಡಿಗಾಲ ಗ್ರಾಮದ ರೈತರು ಚಿಕ್ಕಮೋರಿ ಕಾಲುವೆ ಸಮೀಪ ಗುರುವಾರ ಪ್ರತಿಭಟನೆ ನಡೆಸಿದರು.

ಚಾಮರಾಜನಗರ- ಗುಂಡ್ಲುಪೇಟೆ ರಸ್ತೆ ತಡೆದ ಪ್ರತಿಭಟನಕಾರರು ಕೆರೆ ತುಂಬಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ರಸ್ತೆ ತಡೆದ ಪರಿಣಾಮ ಕೆಲಕಾಲ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು.

ಸ್ಥಳಕ್ಕೆ ಬಂದ ಎಇಇ ಮಹೇಶ್ ರೈತರ ಅಹವಾಲು ಆಲಿಸಲು ಆಲಿಸಿದರು, ಈ ಸಂದರ್ಭ ಕೆರೆಗೆ ನೀರು ತುಂಬಿಸುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು. ಆಗ ಕೆರೆಗೆ ನೀರು ತುಂಬಿಸುವ ಅಧಿಕಾರ ಇಲ್ಲ ಎಂಜಿನಿಯರ್ ಉತ್ತರಿಸಿದಾಗ ಸಿಟ್ಟಿಗೆದ್ದ ರೈತರು ಘೋಷಣೆ ಕೂಗಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಕೆರೆಗೆ ನೀರು ತುಂಬಿಸಲು ಸಾಧ್ಯವಾಗದಿದ್ದರೆ ಅಧಿಕಾರಿಗಳು ರೈತರಿಗೆ ವಿಷ ಕೊಡಿ ಎಂದು ಘೋಷಣೆ ಕೂಗಿದರು.

ರೈತ ಮುಖಂಡ ಗುರುಪ್ರಸಾದ್ ಮಾತನಾಡಿ, ‘ಕೆರೆಗೆ ನೀರು ತುಂಬಿಸುವಂತೆ ಹಲವು ಬಾರಿ ಮನವಿ ಮಾಡಿದರೂ ನೀರು ತುಂಬಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ. 3 ತಿಂಗಳು ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಗ್ರಾಮಸ್ಥರು ಆಹೋರಾತ್ರಿ ಚಳವಳಿ ನಡೆಸಲಾಗಿತ್ತು. ಬಳಿಕ ನೀರು ತುಂಬಿಸಲು ಪೈಪ್ ಅಳವಡಿಸಲಾಗಿತ್ತು, ಆದರೆ ಬಳಿಕ ಮೂರನೇ ಹಂತದಲ್ಲಿ ಕೆರೆಗೆ ನೀರು ಬಿಟ್ಟಿದ್ದರಿಂದ ಕೇವಲ ಶೇ 20ರಷ್ಟು ಮಾತ್ರ ಕೆರೆ ತುಂಬಿದೆ. ಕೆರೆ ಪೂರ್ತಿ ತುಂಬಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಅಧಿಕಾರಿಗಳು ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಡಿವೈಎಸ್ಪಿ ಸ್ನೇಹಾರಾಜ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಘು, ಗುರು, ಸೂರ್ಯ, ರಾಜು, ಕುಮಾರ್, ಅಭಿ, ರೇವಣ್ಣ, ಮಹೇಶ್, ಮಾದೇಶ್, ಮಲ್ಲಿಕ್, ಉಡಿಗಾಲ, ವೀರನಪುರ ಹಾಗೂ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-37-1974654450

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.