ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಜನ್ಮದಿನಾಚರಣೆ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಕೊರತೆ ನೀಗಿಸಿದ ಬಾಬೂಜಿ 50 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಧೀಮಂತ ರಾಜಕಾರಣಿ ಎಂದು ಸ್ಮರಿಸಿದರು.

ನಗರರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಮಾತನಾಡಿದರು.

ಕೆಪಿಸಿಸಿ ಸದಸ್ಯ ಸೈಯದ್ ರಫಿ, ಕಚೇರಿ ಕಾರ್ಯದರ್ಶಿ ಎ.ಎಚ್.ನಸ್ರುಲ್ಲ ಖಾನ್, ಮುಖಂಡರಾದ ಆಯುಬ್ ಖಾನ್, ಅಲ್ಪಸಂಖ್ಯಾತರ ವಿಭಾಗದ ನಗರ ಘಟಕದ ಅಧ್ಯಕ್ಷ ಇಮ್ರಾನ್ ಅಹಮದ್, ಅಪ್ಸರ್ ಅಹಮದ್, ಸೈಯದ್ ಇರ್ಷಾದ್, ಅಬ್ಬಾಸ್, ಸೈಯದ್ ಫರ್ಮಾನ್, ರಾಮಸಮುದ್ರ ಶಿವಮೂರ್ತಿ, ಪುಟ್ಟಸ್ವಾಮಿ, ರಾಜಣ್ಣ, ಮಹೇಶ್ ಕರಿನಂಜನಪುರ, ಬಸವಣ್ಣ, ಎಚ್.ಎಚ್.ನಾಗರಾಜು, ಸುಂದರ್ ಇದ್ದರು.

ಬಿಜೆಪಿ ಕಚೇರಿಯಲ್ಲಿ ಆಚರಣೆ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾದ ವತಿಯಿಂದ ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಬಾಬುಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮಾತನಾಡಿ, ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಾಬು ಜಗಜೀವನರಾಂ ಹಿಂದೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ರಕ್ಷಣಾ ಸಚಿವರಾಗಿ ರಕ್ಷಣಾ ಕ್ಷೇತ್ರಕ್ಕೆ ಬಲ ತುಂಬಿದರು. ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮಾಡಿದರು ಎಂದರು.

ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ನವೀನ್ ಮೌರ್ಯ ಮಾತನಾಡಿ, ಅಂಬೇಡ್ಕರ್, ಬಾಬು ಜಗಜೀವನರಾಂ ಶೋಷಿತರ ಪರವಾಗಿ ಹೋರಾಟ ಮಾಡಿದ್ದಾರೆ ಎಂದರು.

ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರುಮಹಾದೇವಸ್ವಾಮಿ, ಬಾಲಸುಬ್ರಹ್ಮಣ್ಯಂ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ನಗರ ಮಂಡಲ ಅಧ್ಯಕ್ಷ ಶಿವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲರಾಜು, ಮುಖಂಡರಾದ ಶಿವಣ್ಣ, ನಟರಾಜು, ಚಂದ್ರಶೇಖರ್, ರಾಮಸಮುದ್ರ ಶಿವಣ್ಣ, ಮೂಡಹಳ್ಳಿ ಮೂರ್ತಿ, ವೇಣುಗೋಪಾಲ, ಆರ್.ವಿ.ಮಹಾದೇವಸ್ವಾಮಿ, ಆರ್.ಪುಟ್ಟಮಲ್ಲಪ್ಪ, ನಿಂಗಯ್ಯ, ಪರಶಿವಮೂರ್ತಿ, ರಾಜಪ್ಪ, ಶಿವಕುಮಾರ್, ಮಹದೇವಸ್ವಾಮಿ, ಕಿರಣ್, ಹೇಮಂತ್ ಇದ್ದರು.

ಸ್ಮರಣೆ ಅಗತ್ಯ: ಚಾಮರಾಜನಗರದ 15ನೇ ವಾರ್ಡ್ನಲ್ಲಿ ಬಾಬುಜಗಜೀವನರಾಂ ಯುವಕರ ಕಲಾ ಸಂಘದಿಂದ ಜಯಂತಿ ಆಚರಿಸಲಾಯಿತು. ಜಿಲ್ಲಾ ಮಾದಿಗ ಸಮುದಾಯದ ಸಂಘಟನೆಗಳ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಸವನಪುರ ರಾಜಶೇಖರ್, ಅಧ್ಯಕ್ಷ ಡ್ಯಾನ್ಸ್ ಬಸವರಾಜು, ಉಪಾಧ್ಯಕ್ಷ ರಾಜೇಶ್, ಕನ್ನಡ ಯುವಕರ ಕಲಾ ಸಂಘದ ಜಿಲ್ಲಾಧ್ಯಕ್ಷ ಚಾ.ಸಿ.ಮಂಜುನಾಥ್, ಸದಸ್ಯರಾದ ಗಿರಿಪ್ರಕಾಶ್, ಪ್ರಭುಸ್ವಾಮಿ, ಆಟೋ ಲಿಂಗರಾಜು, ದೀಪು, ಸತೀಶ್, ಯಜಮಾನ ರಾದ ಸಿದ್ದಣ್ಣ, ಲಿಂಗಣ್ಣ, ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-37-1942106915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.