ಸಂತೇಮರಹಳ್ಳಿ: ಗಾಳಿ ಮಳೆಗೆ ನೇಂದ್ರ ಬಾಳೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿಕಾವುದವಾಡಿ ಗ್ರಾಮದ ರಾಚೇಗೌಡ ಎಂಬುವರ ಹೊಲಕ್ಕೆ ಮಾಜಿ ಸಚಿವ ಎನ್.ಮಹೇಶ್ ಭಾನುವಾರ ಭೇಟಿ ನೀಡಿದರು.

ಅವರು ಮಾತನಾಡಿ, ಕಾವುದವಾಡಿ ಗ್ರಾಮದಲ್ಲಿ ರಾಚೇಗೌಡ ₹2 ಲಕ್ಷ ವೆಚ್ಚಮಾಡಿ ಬೆಳೆದಿದ್ದ ಸಾವಯವ ನೇಂದ್ರ ಬಾಳೆ, ಉತ್ತಮ ಇಳುವರಿ ಬಂದು ಕಟಾವು ಹಂತಕ್ಕೆ ಬಂದಿತ್ತು. ಗಾಳಿ, ಮಳೆಗೆ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಅವರಿಗೆ ₹6 ಲಕ್ಷ ಕ್ಕೂ ಹೆಚ್ಚು ಮೊತ್ತದ ನಷ್ಟ ಉಂಟಾಗಿದೆ. ತೋಟಗಾರಿಕೆ ಇಲಾಖೆ ಡಿಡಿ, ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಪರಿಹಾರ ಒದಗಿಸಲು ಕೋರಲಾಗಿದೆೆ ಎಂದರು.

ಹೆಚ್ಚು ಪರಿಹಾರ: ನೀರಾವರಿ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಗೆ ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ಅಡಿ 1 ಹೆಕ್ಟೇರ್ಗೆ ಪ್ರದೇಶಕ್ಕೆ ₹12 ಸಾವಿರ ಪರಿಹಾರ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ₹12 ಸಾವಿರ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ದೇಶವಳ್ಳಿ, ಆಲಹಳ್ಳಿ ಗ್ರಾಮಗಳಲ್ಲಿ ಬೆಳೆಹಾನಿ ಪ್ರದೇಶಗಳಿಗೆ ಬೇಟಿ ನೀಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ರವೀಶ್, ಕೊಳ್ಳೇಗಾಲ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾವುದವಾಡಿ ನಾಗೇಶ್, ಟಗರಪುರ ರೇವಣ್ಣ, ಮುಳ್ಳೂರು ಸೋಮಣ್ಣ, ಚುಂಗಡಿಪುರ ಮಹೇಶ್, ಕಾವುದವಾಡಿ ಕುಮಾರಸ್ವಾಮಿ ಡೇರಿ ಮಹದೇವಸ್ವಾಮಿ, ಜಾನಪ್ಪ, ನಾಗರಾಜು, ಪ್ರಕಾಶ್, ರಾಚೇಗೌಡ, ಮಹದೇವಗೌಡ, ಆಲಹಳ್ಳಿ ಜಗದೀಶ್, ಕಿರಣ್, ಲೋಕೇಶ್ ತಂಡದಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-37-1393391630

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.