ಚಾಮರಾಜನಗರ: ಸಹಸ್ರಾರು ಬಸವ ಅಭಿಮಾನಿಗಳ ಜಯಘೋಷ, ಚೆಂಡೆ, ವೀರಗಾಸೆ, ತಮಟೆ, ನಗಾರಿ, ಮಂಗಳವಾದ್ಯಗಳ ಸದ್ದಿನ ನಡುವೆ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಜಿಲ್ಲಾ ಬಸವ ಬಳಗಗಳ ಒಕ್ಕೂಟ ಹಾಗೂ ಸಿದ್ದಮಲ್ಲೇಶ್ವರ ವಿರಕ್ತ ಮಠದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತ್ಯುತ್ಸವ ಕಣ್ಮನ ಸೆಳೆಯಿತು. ಬೆಳಿಗ್ಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಬಸವೇಶ್ವರ ಪುತ್ಥಳಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪುಷ್ಪ ನಮನ ಸಲ್ಲಿಸಿ ಬಸವೇಶ್ವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದ ಬೆಳ್ಳಿರಥದ ಮೆರವಣಿಗೆಗೆ ಚಾಲನೆ ನೀಡಿದರು. ಸಮಾಜದ ಯುವಕರು, ಮುಖಂಡರು ಬಸವೇಶ್ವರರ ಭಾವಚಿತ್ರ ಇರುವ ಬಸವ ಧ್ವಜಗಳನ್ನು ಹಿಡಿದು ಮುಂದೆ ಸಾಗಿದರು.

ನಂದಿಧ್ವಜ ಕುಣಿತ, ಮಹಿಳಾ ತಂಡದ ಚಂಡೆ, ವೀರಗಾಸೆ, ಬ್ಯಾಂಡ್ಸೆಟ್, ಹುಲಿವೇಷದಾರಿಗಳ ಕುಣಿತ, ಗೊಂಬೆ ಕುಣಿತ ಸಹಿತ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಯ ಅಂದ ಹೆಚ್ಚಿಸಿದವು. ಜಿಲ್ಲಾಧಿಕಾರಿ ಕಚೇರಿ ಮಾರ್ಗ, ಬಿ.ರಾಚಯ್ಯ ಜೋಡಿ ರಸ್ತೆ ಬಸವ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಹಳ್ಳಿಕಾರ್ ಹೋರಿಗಳು, ಸಾಲು ಹೂವಿನ ಪಲ್ಕಕ್ಕಿ ಉತ್ಸವಕ್ಕೆ ಮೆರುಗು ತುಂಬಿದವು.

ಪ್ರಮುಖ ರಸ್ತೆಗಳಲ್ಲಿ ಭಕ್ತರಿಗೆ ಮಜ್ಜಿಗೆ, ಪಾನಕ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತ ಭವನದಿಂದ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಹೊರಟ ಮರವಣಿಗೆ ಭುವನೇಶ್ವರಿ ವೃತ್ತ ತಲುಪಿ ಅಲ್ಲಿಂದ ತಾಗ್ಯರಾಜ ರಸ್ತೆ, ರಥದ ಬೀದಿ, ಚಾಮರಾಜೇಶ್ವರ ದೇವಸ್ಥಾನ ಹಾಗೂ ವೀರಭದ್ರಸ್ವಾಮಿ ದೇವಸ್ಥಾನದ ಮಾರ್ಗವಾಗಿ ಅಗ್ರಹಾರ ಸರ್ಕಲ್ನಿಂದ ಶ್ರೀಮಠಕ್ಕೆ ಮಧ್ಯಾಹ್ನದ ಹೊತ್ತಿಗೆ ತಲುಪಿತು.

ಬಸವ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಭಕ್ತರು ಬಸ್ಸು, ಕಾರು, ಆಟೊ ಸಹಿತ ಬಾಡಿಗೆ ವಾಹನಗಳಲ್ಲಿ ಆಗಮಿಸಿದ್ದರು. ವಿರಕ್ತಮಠದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಅಂದಾಜು 30,000ಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಧರ್ಮ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ಸಮಾಜ ಮತ್ತು ದೇಶ ಉಳಿದು ಅಭಿವೃದ್ಧಿಯಾಗುತ್ತದೆ. ಬಸವ ಜಯಂತಿ ನಾಡಿನ ಧರ್ಮ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದು ಎಲ್ಲರೂ ಭಾಗವಹಿಸಿ ಸಂಭ್ರಮಿಸಬೇಕು ಎಂದರು.12ನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಧರ್ಮ ಉಳಿಸುವ ಹಾಗೂ ಸಂಸ್ಕೃತಿ, ಪರಂಪರೆಯನ್ನು ಕಟ್ಟುವ ಕಾರ್ಯ ಮಾಡಿದರು. ಶರಣರ ಆಶಯಗಳನ್ನು ಸಮುದಾಯ ಈಡೇರಿಸಬೇಕು, ಬಸವೇಶ್ವರ ಜಯಂತಿ ಆಚರಣೆಗೆ ಸಿಮೀತಗೊಳ್ಳದೆ ಶರಣರ ತತ್ವ ಅದರ್ಶಗಳ ಪಾಲನೆಯಾಗಬೇಕು, ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು. ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪಿ.ಮರಿಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಬಸವ ಅಭಿಮಾನಿಗಳು ಬಸವ ಜಯಂತ್ಯುತವದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಮೊದಲ ಪ್ರಯತ್ನಕ್ಕೆ ಅಭೂತಪೂರ್ವ ಬೆಂಬಲ ಹಾಗೂ ಯಶಸ್ಸು ದೊರೆತಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ ಮಂಜುನಾಥ್, ಚಾಮರಾಜನಗರ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಮಾಜಿ ಶಾಸಕ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಸಿ.ಎಸ್. ನಿರಂಜನ್ಕುಮಾರ್, ಎಸ್.ಬಾಲರಾಜು, ಪರಿಮಳಾ ನಾಗಪ್ಪ, ಜಿ.ಎನ್.ನಂಜುಂಡಸ್ವಾಮಿ, ಒಕ್ಕೂಟದ ಕಾರ್ಯದರ್ಶಿ ದೊಡ್ಡರಾಯಪೇಟೆ ಗಿರೀಶ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ.ರವಿಕುಮಾರ್, ಬಸವ ಕೇಂದ್ರ ಅಧ್ಯಕ್ಷ ಎನ್ರಿಎಚ್ ಮಹದೇವಸ್ವಾಮಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೂರು ಪ್ರದೀಪ್, ಕೆ.ವೀರಭದ್ರಸ್ವಾಮಿ, ಹೊನ್ನಹಳ್ಳಿ ವೃಷಬೇಂದ್ರಪ್ಪ, ಸಿದ್ದಮಲ್ಲಪ್ಪ, ಪ್ರಭುಸ್ವಾಮಿ, ಬಾಲಚಂದ್ರಮುರ್ತಿ, ಬಿಸಲವಾಡಿ ಉಮೇಶ್, ಕಾವುದವಾಡಿ ಗುರು, ಸದಾಶಿವಮೂರ್ತಿ, ಚಿನ್ನಮ್ಮ, ಕುಮುದಾ, ರತ್ನಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-37-317314503

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.