ಚಾಮರಾಜನಗರ: ರಾಮಸಮುದ್ರ ಬಡಾವಣೆಯಲ್ಲಿರುವ ಶ್ರೀಗುರುಕಂಬಳೇಶ್ವರ ಭಿಕ್ಷದಮಠದಲ್ಲಿ ಮೇ 23 ಹಾಗೂ 24 ರಂದು ಬಸವ ಜಯಂತಿ ಹಾಗೂ ಧಾರ್ಮಿಕ ಸಭೆ ನಡೆಯಲಿದೆ ಎಂದು ಸಮಾಜದ ಮುಖಂಡ ಗೌಡಿಕೆ ಮಹೇಶ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 23ರಂದು ಬಸವ ಜಯಂತಿ ಅಂಗವಾಗಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಲಿದೆ, ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು ಸಮುದಾಯದ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.

24ರಂದು ಧಾರ್ಮಿಕ ಸಭೆ ನಡೆಯಲಿದ್ದು ಅಂದು 3 ದಶಕಗಳಿಂದ ಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಮಲ್ಲನಮೂಲೆ ಚನ್ನಬಸವ ಸ್ವಾಮೀಜಿಗೆ ನುಡಿನಮನ ಕಾರ್ಯಕ್ರಮ, ಬಸವ ಮಂದಿರದ 12ನೇ ವಾರ್ಷಿಕೋತ್ಸವ ಹಾಗೂ ಶ್ರೀಮಠದ 30ನೇ ವಾರ್ಷಿಕೋತ್ಸವ ನಡೆಯಲಿದೆ. ಬೆಳಿಗ್ಗೆ 7ಕ್ಕೆ ಷಟ್ಸ್ಥಳ ಧ್ವಜಾರೋಹಣ ನಡೆಯಲಿದ್ದು ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಭಾಗವಹಿಸಲಿದ್ದಾರೆ. ಮಲ್ಲಯ್ಯನಮೂಲೆ ಮಠಾಧ್ಯಕ್ಷ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.

10.30ಕ್ಕೆ ದೇವನೂರು ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠದ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸುವವರು, ಹರವೆ ವಿರಕ್ತ ಮಠಾಧ್ಯಕ್ಷ ಸರ್ಪಭೂಷಣ ಸ್ವಾಮೀಜಿ, ಮರಿಯಾಲ ಮುರುಘರಾಜೇಂದ್ರ ಮಠಾಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಮುಡುಕನಪುರ ಹಲವಾರ ಮಠಾಧ್ಯಕ್ಷ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ನಿವೃತ್ತ ಪ್ರಾಂಶುಪಾಲ ಪ್ರೊ.ಸದಾಶಿವಮೂರ್ತಿ, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಭಾಗವಹಿಸುವವರು.

ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು, ಎರಡೂ ದಿನ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಯಜಮಾನರಾದ ಆರ್.ಪುಟ್ಟಮಲ್ಲಪ್ಪ, ನಾಗರಾಜಪ್ಪ, ಗೌಡಿಕೆ ಗುರುಮಲ್ಲಪ್ಪ, ಮಾಜಿ ಯಜಮಾನರಾದ ಆರ್.ವಿ.ಮಹದೇವಸ್ವಾಮಿ, ಎಲ್.ಮಹದೇವಪ್ಪ, ಮಾಜಿ ಗೌಡಿಕೆ ನಾಗರಾಜು, ಯುವ ಮುಖಂಡ ಆರ್.ಎನ್.ನವೀನ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-37-1664978639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.