ಚಾಮರಾಜನಗರ: 26ನೇ ವಾರ್ಡ್ನಲ್ಲಿರುವ ವಿವೇಕನಗರ ಬಡಾವಣೆಯ ವೃತ್ತಕ್ಕೆ ಶ್ರೀ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲಾಗಿದ್ದು ಮರಿಯಾಲ ಮಠದ ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚೆನ್ನಬಸವ ಸ್ವಾಮೀಜಿ ನಾಮಫಲಕವನ್ನು ಅನಾವರಣ ಮಾಡಿದರು.

ವರ್ತಕರ ಭವನದ ಪಕ್ಕದ ಪೆಟ್ರೋಲ್ ಬಂಕ್ ಪಕ್ಕದಿಂದ ವಿವೇಕ ನಗರಕ್ಕೆ ಬರುವ ರಸ್ತೆಗೆ ಶರಣೆ ಅಕ್ಕ ಮಹಾದೇವಿ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕವನ್ನ ಉಭಯ ಶ್ರೀಗಳು ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮರಿಯಾಲದ ಮುರುಘರಾಜೇಂದ್ರ ಸ್ವಾಮೀಜಿ, 12ನೇ ಶತಮಾನದಲ್ಲಿ ಬಸವಣ್ಣ ವಚನಗಳ ಮೂಲಕ ಸಮಾಜ ಸುಧಾರಣೆ ಮಾಡಿದರು. ಬಸವ ತತ್ವಗಳು ವಿಶ್ವದಲ್ಲೆಡೆ ಪಸರಿಸಬೇಕು, ವಚನಗಳ ಸಾಲ ಸಮಾಜದ ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದು ಸಲಹೆ ನೀಡಿದರು.

ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ವೈಚಾರಿಕತೆ ಸಾರಿದರು. ಅವರ ಹೆಸರಿನಲ್ಲಿ ವೃತ್ತಕ್ಕೆ ನಾಮಕರಣವಾಗಿರುವುದು ಸಂತಸದ ವಿಚಾರ. ಬಸವಣ್ಣನವರ ವಿಚಾರಗಳನ್ನೂ ಸಮಾಜ ಮೈಗೂಡಿಸಿಕೊಳ್ಳಬೇಕು ಎಂದರು.

ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಆರ್.ಎಂ.ಸ್ವಾಮಿ ಮಾತನಾಡಿ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು, ವೈಯಕ್ತಿಕವಾಗಿ ₹ 1 ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.

ವಿವೇಕನಗರ ಮುಖಂಡ ಗುರುಸ್ವಾಮಿ ಮಾತನಾಡಿ, ವೃತ್ತಕ್ಕೆ ಬಸವೇಶ್ವರರ ಹೆಸರಿಡಲು ನಗರಸಭೆ ಮಾಜಿ ಸದಸ್ಯೆ ಕುಮುದಾ ಕೇಶವಮೂರ್ತಿ ನೆರವು ನೀಡಿದ್ದು ಅಭಿನಂದನೀಯ ಎಂದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ.ಶ್ವೇತಾ ಶಶಿಧರ್, ನಗರಸಭೆ ಮಾಜಿ ಸದಸ್ಯೆ ಕುಮುದಾ ಕೇಶವಮೂರ್ತಿ ಮಾತನಾಡಿದರು.

ಜಿ. ಶಶಿಧರ್, ಉದ್ಯಮಿ ಬಸವಟ್ಟಿಗೆ ಬಸವರಾಜು, ಸಿದ್ದಮಲ್ಲಪ್ಪ, ಯೋಗೀಶ್, ನಂದೀಶ್ ಕೊಮಾರನಪುರ, ದೊ.ರಾ.ಪೇಟೆ ಕುಮಾರ್, ನಾಗರಾಜು, ಕಿಲಗೆರೆ ಚಂದ್ರಶೇಖರ್, ಎಸ್ಜಿಎಂ ಪ್ರಭುಸ್ವಾಮಿ, ಸಿ. ನಾಗಣ್ಣ, ಡಿ.ಎಸ್. ಗಿರೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-37-1655772084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.