ಚಾಮರಾಜನಗರ: ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿಯನ್ನು ಮೇ 22ರಂದು ಅದ್ದೂರಿಯಾಗಿ ಆಚರಿಸಲು ಬಸವ ಬಳಗಗಳ ಒಕ್ಕೂಟ ನಿರ್ಧರಿಸಿದೆ.

ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅವರಣದಲ್ಲಿ ಮಂಗಳವಾರ ಬಸವ ಬಳಗದ ಗೌರವಾಧ್ಯಕ್ಷ ಚನ್ನಬಸವ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರು ಸಲಹೆ ಸೂಚನೆಗಳನ್ನು ನೀಡಿ ಬಸವ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸಿದರು.

ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎಲ್ಲ ವೀರಶೈವ ಲಿಂಗಾಯತ ಮಹಾಸಭಾಗಳು, ಸಂಘ ಸಂಸ್ಥೆಗಳು ಒಟ್ಟುಗೂಡಿ ಬಸವ ಬಳಗಗಳ ಒಕ್ಕೂಟ ರಚಿಸಿಕೊಂಡಿದ್ದು ಬಸವ ಜಯಂತಿಯನ್ನು ಒಟ್ಟಾಗಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಬಸವ ಜಯಂತಿಯ ಯಶಸ್ಸಿಗೆ ಸಮುದಾಯದ ಎಲ್ಲರ ಸಹಕಾರ ಮುಖ್ಯ’ ಎಂದರು.

‘ಸಿದ್ದಮಲ್ಲೇಶ್ವರ ಮಠದ ವತಿಯಿಂದ ಮೇ 21, 22ರಂದು ಗ್ರಾಮಾಂತರ ಬಸವ ಜಯಂತಿ ನಡೆಯಲಿದೆ. ಶ್ರೀಗಳ ಜೊತೆಗೂಡಿ 22ರಂದು 10 ಸಾವಿರಕ್ಕೂ ಹೆಚ್ಚು ಜನರು ಸೇರಿ ಬಸವಣ್ಣನ ಭಾವಚಿತ್ರ ಮೆರವಣಿಗೆಯನ್ನು ನಡೆಸೋಣ. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ’ ಎಂದು ಹೇಳಿದರು.

ಬಸವ ಜಯಂತಿ ಆಚರಣೆಗೆ ಹಣಕಾಸು, ಪ್ರಚಾರ, ಸ್ವಾಗತ ಸಮಿತಿ ರಚಿಸಲಾಗಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕಿನ ಮುಖಂಡರು, ಯುವಕರು, ಮಹಿಳಾ ಸಂಘಟನೆಗಳು ಭಾಗಿಯಾಗಬೇಕು ಎಂದು ಮರಿಸ್ವಾಮಿ ಮನವಿ ಮಾಡಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಬಸವೇಶ್ವರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಜಿಲ್ಲಾಡಳಿತ ಭವನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿರುವ ಮೆರವಣಿಗೆ ಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ಸಮಾಪನಗೊಳ್ಳಲಿದೆ. ಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮುಖಂಡರಾದ ಮೂಡ್ಲುಪುರ ನಂದೀಶ್, ಕಾಳನಹುಂಡಿ ಗುರುಸ್ವಾಮಿ, ಎನ್.ಗುರುಸ್ವಾಮಿ, ಬಿ.ಕೆ. ರವಿಕುಮಾರ್, ಎನ್ರಿಚ್ ಮಹದೇವಸ್ವಾಮಿ, ಶ್ವೇತಾ ಶಶಿಧರ್, ವಸಂತಮ್ಮ, ಸುಧಾ ಮಲ್ಲಣ್ಣ, ಬಾಲಚಂದ್ರ ಮೂರ್ತಿ, ಮಹದೇವ ಸ್ವಾಮಿ, ಮಹದೇವಪ್ಪ, ಸೋಮಶೇಖರ್, ಗುರುಪ್ರಸಾದ್, ಆಲೂರು ಮಲ್ಲು, ಗುರು, ಕೆ. ವೀರಭದ್ರಸ್ವಾಮಿ, ಎಲ್, ಸುರೇಶ್, ಜಗದೀಶ್ ಇದ್ದರು. ದೊಡ್ಡರಾಯಪೇಟೆ ಗಿರೀಶ್ ನಿರೂಪಿಸಿದರು, ಸಿದ್ದಮಲ್ಲಪ್ಪ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-37-2145588108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.