ಚಾಮರಾಜನಗರ: ಮಾರುಕಟ್ಟೆಯಲ್ಲಿ ಬೀನ್ಸ್ ದರ ಭಾರಿ ಜಿಗಿತ ಕಂಡಿದ್ದು ದ್ವಿಶತಕದ ಗಡಿ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಬೀನ್ಸ್ ಬರೋಬ್ಬರಿ ₹ 180ರಿಂದ 200ರವರೆಗೆ ಮಾರಾಟವಾಗುತ್ತಿದೆ. ಈ ವರ್ಷದಲ್ಲಿ ದಾಖಲಾದ ಅತ್ಯಂತ ಗರಿಷ್ಠ ದರ ಇದಾಗಿದೆ.

ಕಳೆದ ಒಂದು ತಿಂಗಳಿನಿಂದಲೂ ಏರುಗತಿಯಲ್ಲಿದ್ದ ಬೀನ್ಸ್ ₹ 100 ರಿಂದ 120ರ ಆಸುಪಾಸಿನಲ್ಲಿತ್ತು. ಪ್ರಸ್ತುತ ದಿಢೀರ್ ದರ ಹೆಚ್ಚಾಗಿದ್ದು, ಗ್ರಾಹಕರು ಹಾಗೂ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.

ದರ ಏರಿಕೆಗೆ ಕಾರಣ: ಅತಿಯಾದ ಬಿಸಿಲು, ಪೂರ್ವ ಮುಂಗಾರು ಮಳೆ ಕೊರತೆ, ಬೀನ್ಸ್ ಬೆಳೆ ಕ್ಷೇತ್ರ ಕುಸಿತ, ರೋಗ ಬಾಧೆ ಸಹಿತ ಹಲವು ಕಾರಣಗಳಿಂದ ಬೀನ್ಸ್ ದರ ಹೆಚ್ಚಳವಾಗಿದೆ. ತೀವ್ರ ಮಳೆ ಕೊರತೆಯಿಂದ ಇಳುವರಿ ಕುಸಿದಿದ್ದು, ಮಾರುಕಟ್ಟೆಯ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.

‘ಹೆಚ್ಚು ತರಕಾರಿ ಬೆಳೆಯುವ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಂದಲೂ ಪೂರೈಕೆ ಇಳಿಮುಖವಾಗಿರುವುದು’ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

‘ಜಿಲ್ಲೆಯು ಬಹುತೇಕ ಮಳೆಯಾಶ್ರಿತ ಕೃಷಿ ಭೂಮಿ ಹೊಂದಿರುವುದರಿಂದ ಬೇಡಿಕೆಯಷ್ಟು ಬೀನ್ಸ್ ಬೆಳೆಯುವುದಿಲ್ಲ, ಗ್ರೀನ್ ಹೌಸ್, ಹನಿ ನೀರಾವರಿ ಸೌಲಭ್ಯ ಹಾಗೂ ನಾಲೆಗಳ ನೀರು ಲಭ್ಯತೆ ಇರುವ ಕಡೆಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಈ ವರ್ಷ ಅಂತರ್ಜಲ ತೀವ್ರ ಕುಸಿತವಾಗಿರುವುದು ಹಾಗೂ ಕೊಳವೆ ಬಾವಿಗಳು ಬಹುತೇಕ ಬರಿದಾಗಿರುವುದು ತರಕಾರಿ ಬೆಳೆಯಲು ಹಿನ್ನಡೆಯನ್ನುಂಟು ಮಾಡಿದೆ’ ಎಂಬುದು ರೈತರ ಅಭಿಪ್ರಾಯ.

‘ಮದುವೆ, ಗೃಹ ಪ್ರವೇಶ ಸಹಿತ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದರವು ಏರಿಕೆಯಾಗಿದೆ. ಬೇಸಿಗೆಯ ರಜೆ ಇರುವುದರಿಂದ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದು ಕೂಡ ತರಕಾರಿ ದರಗಳು ಹೆಚ್ಚಾಗಲು ಕಾರಣವಾಗಿದೆ’ ಎನ್ನುತ್ತಾರೆ ವ್ಯಾಪಾರಿ ಮಧುಸೂದನ್.

‘ಕಳೆದ ವಾರ ಕೆ.ಜಿಗೆ ₹ 60 ದಾಟಿದ್ದ ಟೊಮೆಟೊ ದರ ಅಲ್ಪ ಇಳಿಕೆಯಾಗಿದ್ದು ₹40 ರಿಂದ ₹50ಕ್ಕೆ ಸಿಗುತ್ತಿದೆ, ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿರುವುದು ದರ ಕುಸಿತಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು.

ತಿಂಗಳ ಹಿಂದೆ ಕೆ.ಜಿಗೆ ₹ 80ರಿಂದ ₹ 100 ತಲುಪಿದ್ದ ತೆಂಗಿನ ಕಾಯಿ ದರ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹40ರಿಂದ ₹50 ದರ ಇದ್ದು ಒಂದು ವಾರದಿಂದ ಸ್ಥಿರವಾಗಿದೆ.

ಬೇಸಗೆಯ ದಗೆ ಹಾಗೂ ನೀರಿನ ಕೊರತೆಯಿಂದ ಹೂವಿನ ಇಳುವರಿ ಕುಸಿದಿರುವುದು ಹಾಗೂ ಮದುವೆ ಮಂಟಪ, ಹೊಸ ಮನೆಗಳ ಅಲಂಕಾರಕ್ಕೆ ಹೂಗಳ ಬಳಕೆ ಹೆಚ್ಚಾಗಿರುವುದರಿಂದ ಹೂವಿಗೆ ಬೇಡಿಕೆ ಸೃಷ್ಟಿಸಿದೆ. ಸಾಮಾನ್ಯವಾಗಿ ಕೆ.ಜಿಗೆ ₹20ರ ಆಸುಪಾಸಿನಲ್ಲಿರುತ್ತಿದ್ದ ಚೆಂಡು ಹೂ ಪ್ರಸ್ತುತ ₹50 ರಿಂದ ₹60ಕ್ಕೆ ಹೆಚ್ಚಾಗಿದೆ.

‘ಸಣ್ಣ ಮಲ್ಲಿಗೆ ₹ 100 ರಿಂದ ₹160, ಮಲ್ಲಿಗೆ ₹300 ರಿಂದ ₹320, ಸೇವಂತಿಗೆ ₹160 ರಿಂದ ₹200, ಸುಗಂಧರಾಜ ₹30 ರಿಂದ ₹40, ಗುಲಾಬಿ ₹160 ರಿಂದ ₹240, ಕನಕಾಂಬರ ₹800 ರಿಂದ ₹1,000 ದರ ಇದೆ’ ಎನ್ನುತ್ತಾರೆ ಚೆನ್ನಾಪುರದ ಮೊಳೆಯ ಹೂವಿನ ವ್ಯಾಪಾರಿ ರವಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-37-6536495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.