ಚಾಮರಾಜನಗರ: ಏ.23ರಂದು ಸರಳ ಹಾಗೂ ಸಾಂಕೇತಿಕವಾಗಿ ಭಗೀರಥ ಜಯಂತಿ ಆಚರಿಸಿ ಶೀಘ್ರ ಪ್ರತ್ಯೇಕ ದಿನಾಂಕ ಗೊತ್ತುಪಡಿಸಿ ಅದ್ದೂರಿ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಭಗೀರಥ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮುದಾಯದ ಗಡಿಮನೆ ಯಜಮಾನರು, ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಅಭಿಪ್ರಾಯ ಪಡೆದು ವಿಜೃಂಭಣೆಯಿಂದ ಭಗೀರಥ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಮುಖಂಡರು ಮಾತನಾಡಿ, ಏ.23ರಂದು ಗಂಗ ಸಪ್ತಮಿಯ ದಿನ ಸರಳವಾಗಿ ಭಗೀರಥ ಜಯಂತಿ ಆಚರಿಸಬೇಕು. ಭಗೀರಥರು ಹಾಗೂ ಗಡಿಕಟ್ಟೆಗಳ ಮಹತ್ವದ ಬಗ್ಗೆ ಬರೆದಿರುವ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ವಿತರಿಸಬೇಕು. ಭಗೀರಥ ಮಹರ್ಷಿಗಳ ಸಾಧನೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಮಾತನಾಡಿ, ಸಮುದಾಯದ ಬೇಡಿಕೆಯಂತೆ ಭಗೀರಥ ಪುತ್ಥಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಮಹರ್ಷಿ ವಾಲ್ಮೀಕಿ ಮತ್ತು ಕನಕದಾಸರ ಪುತ್ಥಳಿಯ ನಿರ್ಮಾಣವೂ ನಡೆಯುತ್ತಿದ್ದು ಮೂರು ಪುತ್ಥಳಿಗಳ ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆಗೆ ಕ್ರಮ ವಹಿಸಲಾಗುವುದು ಎಂದರು.

ಡಿವೈಎಸ್ಪಿ ಸ್ನೇಹಾ ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಗಡಿಮನೆ ಯಜಮಾನರಾದ ಜಯಸ್ವಾಮಿ, ಕೃಷ್ಣ, ಜಯಸಿದ್ದು, ಸಿ.ಕೆ.ಮಹದೇವಶೆಟ್ಟಿ, ಮುಖಂಡರಾದ ಮಂಗಲ ಶಿವಕುಮಾರ್, ಸಿ.ಎ.ಮಹದೇವಶೆಟ್ಟಿ, ಸಿ.ಎಸ್.ನಾಗರಾಜ, ಸಾಗಡೆ ಕೃಷ್ಣಶೆಟ್ಟಿ, ನೂರೊಂದು ಶೆಟ್ಟಿ, ಎಂ.ಜಯಕುಮಾರ್, ಕಾವೇರಿ ಶಿವಕುಮಾರ್, ಸಿ.ಎಂ.ನರಸಿಂಹಮೂರ್ತಿ, ಜಿ.ಬಂಗಾರು, ಚಾ.ಗು.ನಾಗರಾಜು, ಬ್ಯಾಡಮೂಡ್ಲು ಬಸವಣ್ಣ, ನಾರಾಯಣ ಹಾಗೂ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-37-1575261819

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.