ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಅಪಾರ ಭಕ್ತರ ಸಡಗರ ಸಂಭ್ರಮಗಳ ನಡುವೆ ಗರುಡೋತ್ಸವ ಸೇವೆ ಅದ್ದೂರಿಯಾಗಿ ನಡೆಯಿತು.

ಚೈತ್ರ ಬಹುಳ ನವಮಿ ಉತ್ತರಾಷಾಢ ನಕ್ಷತ್ರದಲ್ಲಿ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ತುಳುಸಮ್ಮ ಮತ್ತು ಲಕ್ಷ್ಮಿದೇವಿ ಸಮೇತ ರಥಾರೋಹಣ ಮಾಡಲಾಯಿತು. ಜಯಘೋಷಗಳ ನುಡುವೆ ಬೆಳ್ಳಿ ದಂಡಕ ಹೊತ್ತ ಭಕ್ತಪಡೆ ದೇವಾಲಯದ ಸುತ್ತಲೂ ರಥ ಎಳೆದು ಸಂಭ್ರಮಿಸಿದರು. ವಾರಾಂತ್ಯದ ಹಿನ್ನಲೆಯಲ್ಲಿ ಭಕ್ತರು ಹಣ್ಣು ಕಾಯಿ ಪೂಜೆ ನಡೆಸಿ ಧೂಪ ದೀಪ ಬೆಳಗಿ ಹರಕೆ ಸಲ್ಲಿಸಿದರು.

ಶನಿವಾರ ದೇವಳದಲ್ಲಿ ವಿಶೇಷ ಪೂಜೆ ಸಲ್ಲುತ್ತದೆ. ದಾಸಪಡೆ ಬ್ಯಾಟಮನೆ ಉತ್ಸವ ನಡೆಸುತ್ತಾರೆ. ಮಕ್ಕಳು ಮತ್ತು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. ಪೂಜಾರತಿ ನಂತರ ದಾಸೋಹದಲ್ಲಿ ಪ್ರಸಾದ ಸೇವಿಸಿ ಧನ್ಯತೆ ಮೆರೆದರು ಎಂದು ಅರ್ಚಕ ರವಿಕುಮಾರ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-37-1563607090

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.