ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಜನಪದ ಕಾವ್ಯಗಳ ಅಮೂಲ್ಯ ಸಂಪತ್ತಿನ ಕೇಂದ್ರವಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಂಸ ಸಭಾಂಗಣದಲ್ಲಿ ಬಿಳಿಗಿರಂಗನಾಥ ಸ್ವಾಮಿ ಆಧ್ಯಾತ್ಮಿಕ ಮತ್ತು ಜಾನಪದ ಮಹತ್ವ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಬಿಳಿಗಿರಿ ರಂಗನಾಥ ಕ್ಷೇತ್ರ ಆಧ್ಯಾತ್ಮಿಕವಾಗಿ ಮಾತ್ರವಲ್ಲ ಪ್ರಾಕೃತಿಕವಾಗಿ ವೈವಿಧ್ಯಮಯವಾಗಿದೆ ಪೌರಾಣಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಬಿಳಿಗಿರಂಗನಾಥ ಹಾಗೂ ಸೋಲಿಗರ ನಡುವೆ ಅವಿನಾಭಾವ ಸಂಬಂಧ ಇದೆ ಎಂದರು. ಬಿಳಿಗಿರಿ ರಂಗನ ಬೆಟ್ಟ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು ಆಯುರ್ವೇದ ಸಸ್ಯಗಳಿಗೂ ಪ್ರಸಿದ್ಧಿಯಾಗಿದೆ. ಇಲ್ಲಿನ ಸೋಲಿಗರ ಜೀವನ ಮೌಲ್ಯಗಳು ಚಿಂತನೆಗಳು. ವಿಶಿಷ್ಟ ಜನಪದ ಚಿಂತನೆಗಳು ಸತ್ವಯುತವಾಗಿವೆ. ಭಗವಂತ ಬಿಳಿಗಿರಂಗನಾಥನನ್ನು ‘ಭಾವ’ನ ರೂಪದಲ್ಲಿ ಕಾಣುವ ಮೂಲಕ ಸೋಲಿಗರು ಭಗವಂತನ ನಡುವೆ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯದ ಪ್ರತೀಕವಾಗಿ ನಿಲ್ಲುತ್ತಾರೆ.

ಬಿಳಿಗಿರಿ ರಂಗನಾಥ ಸೋಲಿಗರ ಕುಸುಮಾಲೆಯನ್ನು ವಿವಾಹವಾಗುವ ಸನ್ನಿವೇಶವು ಜನಪದ ಕಾವ್ಯಗಳಲ್ಲಿ ಬಹಳ ಸುಂದರವಾಗಿ ಮೂಡಿಬಂದಿದೆ. ಸೋಲಿಗ ಸಂಸ್ಕೃತಿಯನ್ನು ಗೌರವಿಸುವ, ಮಹತ್ವವನ್ನು ತಿಳಿಯುವ ಕಾರ್ಯವನ್ನು ಯುವ ಜನಾಂಗ ಮಾಡಬೇಕು. ಬಿಳಿಗಿರಿರಂಗನ ಬೆಟ್ಟ ಚಾಮರಾಜನಗರದ ಹೆಮ್ಮೆ ಎಂದು ತಿಳಿಸಿದರು.

ಬರಹಗಾರ ಎಸ್.ಲಕ್ಷ್ಮೀ ನರಸಿಂಹ ಮಾತನಾಡಿ ಧರ್ಮದ ತಳಹದಿ ಉಳಿಸಿ ಬೆಳೆಸಬೇಕಿದೆ. ಸಾಹಿತ್ಯ ಮತ್ತು ಜನಪದದ ಮೌಲ್ಯ ತಿಳಿಯುವುದು ಬಹಳ ಮುಖ್ಯ. ಬಿಳಿಗಿರಿ ರಂಗನಾಥನ ಕ್ಷೇತ್ರ ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದು ಬಿಳಿಗಿರಿ ರಂಗನ ಕಾವ್ಯಗಳು ದೇಶ ವಿದೇಶಗಳಿಗೆ ಹಬ್ಬಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರವಿಚಂದ್ರ ಪ್ರಸಾದ್ ಕಹಳೆ ಬಿಳಿಗಿರಿ ರಂಗನಾಥ ಸ್ವಾಮಿಯ ಬಹುಪರಾಕ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಾ ಪುರುಷೋತ್ತಮ್, ಪಪರಿಷತ್ತಿನ ಶಿವಲಿಂಗ ಮೂರ್ತಿ, ಬಿ.ಕೆ.ಆರಾಧ್ಯ, ರಾಜಗೋಪಾಲ್, ಮಂಜುನಾಥ್, ಸರಸ್ವತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-37-887793124

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.