ಚಾಮರಾಜನಗರ: ನಗರಸಭೆ ವ್ಯಾಪ್ತಿಯ ರಾಮಸಮುದ್ರ, ದೊಡ್ಡಬೀದಿ, ಚಿಕ್ಕಬೀದಿ, ಕುರುಬರ ಬೀದಿ, ಹೌಸಿಂಗ್ ಬೋರ್ಡ್ ಕಾಲೋನಿ, ಗಾಳೀಪುರ ಬಡಾವಣೆಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ ಕುಡಿಯುವ ನೀರು, ರಸ್ತೆ, ಚರಂಡಿ ಸಮಸ್ಯೆ ಕುರಿತು ನಿವಾಸಿಗಳಿಂದ ಅಹವಾಲು ಸ್ವೀಕರಿಸಿದರು.

ಇದೇವೇಳೆ ಮಾತನಾಡಿ ಬೇಸಿಗೆ ಆರಂಭವಾಗಿದ್ದು, ‘ಅಂತರ್ಜಲ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹರಿಸಲು ಬೋರ್ವೆಲ್ ಕೊರೆಸಲು ಅಂತರ್ಜಲ ಪರೀಕ್ಷಕರನ್ನು ಕರೆಸಿ ಪಾಯಿಂಟ್ ಮಾಡಿಸಬೇಕು, ನೀರು ಸಿಗುವ ಕಡೆ ತುತ್ತು ಕೊಳವೆಬಾವಿ ಕೊರೆಸಿ ಪೈಪ್ಲೈನ್ ಅಳವಡಿಕೆ ಮಾಡಿ ಜನರಿಗೆ ನೀರು ಕೊಡಬೇಕು, ಹಳೆಯ ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾರ್ಡ್ಗಳ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಮುಗಿದಿರುವ ಕಡೆಗಳಲ್ಲಿ ರಸ್ತೆ ಅಭಿವೃದ್ದಿಗೆ ಕ್ರಮವಹಿಸಲಾಗುವುದು ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.

ರಾಮಸಮುದ್ರದದ ಚಿಕ್ಕಬೀದಿ ನಿವಾಸಿಗಳು ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ದೊಡ್ಡಬೀದಿ ನಿವಾಸಿಗಳು ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗೆ ಹಣ ಮಂಜೂರು ಮಾಡಲು ಮನವಿ ಮಾಡಿದರು. ಬುದ್ದನಗರದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಸ್ಥಳೀಯರು ಮನವಿ ಸಲ್ಲಿಸಿದರು.

ಮುಖಂಡರಾದ ಸೈಯದ್ ರಫಿ, ಸೈಯದ್ ಮುಸಾಯಿದ್, ನಾಗರಾಜು, ಬಸವರಾಜು, ಆರ್.ಎಂ.ರಾಜಪ್ಪ, ರಾಮಸಮುದ್ರ ಸುರೇಶ್, ಮಹದೇವಸ್ವಾಮಿ, ಮಹೇಶ್, ಸ್ವಾಮಿ, ನಗರಸಭೆ ಜೆಇ ರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-37-10916291

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.