ಚಾಮರಾಜನಗರ: ಸಾರ್ವಜನಿಕ ಸ್ಥಳ, ರಸ್ತೆಗಳ ಬದಿ, ಉದ್ಯಾನ, ಖಾಲಿ ನಿವೇಶನ ಹೀಗೆ ಎಲ್ಲೆಂದರಲ್ಲಿ ಹರಡಿರುವ ಕಸದ ರಾಶಿ, ರಾಜಕಾಲುವೆ, ಚರಂಡಿಯೊಳಗೆ ತುಂಬಿರುವ ತ್ಯಾಜ್ಯ, ಕಾರಂಜಿಯಂತೆ ಚಿಮ್ಮುವ ಮ್ಯಾನ್ಹೋಲ್ಗಳು, ರಸ್ತೆ ಮೇಲೆ ಹರಿಯುವ ಹೊಲಸು... ಜಿಲ್ಲಾಕೇಂದ್ರ ಎನಿಸಿಕೊಂಡಿರುವ ಚಾಮರಾಜನಗರದೊಳಗೆ ಅಡ್ಡಾಡಿದರೆ ಕಾಣುವ ಚಿತ್ರಣ ಇದು.

ಇನ್ನೇನು ಪೂರ್ವ ಮುಂಗಾರು ಆರಂಭವಾಗುವ ಮುನ್ಸೂಚನೆ ಸಿಕ್ಕರೂ ನಗರಸಭೆ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ನಗರದಲ್ಲಿ ಹಾದು ಹೋಗಿರುವ ಚರಂಡಿಗಳು,ರಾಜಕಾಲುವೆಗಳು ತ್ಯಾಜ್ಯಗಳಿಂದ ಕಟ್ಟಿಕೊಂಡಿದ್ದು ಮಳೆಗಾಲದಲ್ಲಿ ಅವಾಂತರ ತಂದೊಡ್ಡಲಿದೆ. ವಾರದ ಹಿಂದಷ್ಟೆ ಸುರಿದ ಸಣ್ಣ ಮಳೆ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.

ಅರ್ಧತಾಸು ಸುರಿದ ಮಳೆಗೆ ನಗರಸಭೆಯ ಪಕ್ಕದಲ್ಲಿರುವ ಅಂಗಡಿ ಬೀದಿಯ ಚರಂಡಿ ತುಂಬಿ ಹೊಲಸು ರಸ್ತೆಗೆ ಹರಿದು ಇಡೀ ಪರಿಸರ ಗಬ್ಬೆದ್ದು ನಾರುವಂತಾಯಿತು. ಪ್ಲಾಸ್ಟಿಕ್ ಕವರ್ಗಳು, ಹರಿದ ಚಪ್ಪಲಿ, ಬಟ್ಟೆ, ತರಕಾರಿ ತ್ಯಾಜ್ಯದ ರಾಶಿ ರಸ್ತೆಯ ಮೇಲೆ ಹರಡಿ ಜನರ ಸಂಚಾರಕ್ಕೆ ಅಡ್ಡಿಯಾಯಿತು.

ನಗರದ ಬಹುತೇಕ ವಾರ್ಡ್ಗಳಲ್ಲಿ ಚರಂಡಿ, ರಾಜಕಾಲುವೆಗಳನ್ನು ನಗರಸಭೆ ಸ್ವಚ್ಛಗೊಳಿಸಿಲ್ಲ. ಮುರಿದು ಹೋಗಿರುವ ಮ್ಯಾನ್ಹೋಲ್ಗಳನ್ನೂ ದುರಸ್ತಿಗೊಳಿಸಿಲ್ಲ. ನಗರದ ಕುಲುಮೆ ರಸ್ತೆಯಲ್ಲಿರುವ ಇಮ್ಯಾನುವೆಲ್ ಪಬ್ಲಿಕ್ ಶಾಲೆ ಎದುರುಗಿರುವ ಮ್ಯಾನ್ಹೋಲ್ ಕೆಟ್ಟು ತಿಂಗಳು ಕಳೆದರೂ ರಿಪೇರಿಯಾಗಿಲ್ಲ.

ಪರಿಣಾಮ ಬಡಾವಣೆಯಲ್ಲಿ ಉತ್ಪತ್ತಿಯಾಗುವ ಮಲಮೂತ್ರ ಸಹಿತ ದ್ರವ ತ್ಯಾಜ್ಯ ಮ್ಯಾನ್ಹೋಲ್ನಿಂದ ಹೊರಬಂದು ರಸ್ತೆಗೆ ಹರಿಯುತ್ತಿದೆ. ಇಡೀ ಪರಿಸರ ಗಬ್ಬೆದ್ದು ನಾರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಖುದ್ದು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಾದ ರಾಜಶೇಖರ್ ದೂರುತ್ತಾರೆ.

ಇದೇ ಕುಲುಮೆ ರಸ್ತೆಯಲ್ಲಿರುವ ದೋಸೆ ಹೋಟೆಲ್ ಎದುರು ಮ್ಯಾನ್ಹೋಲ್ ಮುಚ್ಚಳ ಮುರಿದು ವಾರ ಕಳೆದರೂ ಬದಲಾಯಿಸಿಲ್ಲ. ಗುಂಡಿಯ ಸುತ್ತಲೂ ದೊಡ್ಡ ಕಲ್ಲುಗಳನ್ನು ಇರಿಸಲಾಗಿದ್ದು ರಾತ್ರಿಯ ಹೊತ್ತು ರಸ್ತೆ ಕಾಣದೆ ವಾಹನಗಳು ಗುಂಡಿಗೆ ಇಳಿಸಿ ಅಪಘಾತಕ್ಕೀಡಾಗುತ್ತಿವೆ.

ರಾಮಸಮುದ್ರ ವಾರ್ಡ್ನಲ್ಲಿ ಪೌರ ಕಾರ್ಮಿಕರು ನಿಯಮಿತವಾಗಿ ಕಸ ಸಂಗ್ರಹಿಸಲು ಬಾರದೆ ಸ್ಥಳೀಯರು ಅನಿವಾರ್ಯವಾಗಿ ಪ್ರತಿನಿತ್ಯ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಪ್ಲಾಸ್ಟಿಕ್ ಕವರ್ಗಳನ್ನು ಕುಲುಮೆ ರಸ್ತೆಯ ಬದಿ ತಂದು ಬಿಸಾಡುತ್ತಿದ್ದಾರೆ. ಪರಿಣಾಮ ಈ ಜಾಗ ತ್ಯಾಜ್ಯ ವಿಲೇವಾರಿಯ ತಾಣವಾಗಿ ಬದಲಾಗಿದ್ದು ದುರ್ವಾಸನೆಯಿಂದ ಕೂಡಿದೆ.

ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಪ್ರಗತಿನಗರ, ಮಹಾವೀರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಲುವೆ ತ್ಯಾಜ್ಯಗಳಿಂದ ತುಂಬಿದೆ. ಮಳೆ ಬಿದ್ದರೆ ಚರಂಡಿಯ ಕಸ ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದೆ ಇಡೀ ಪರಿಸರ ಕೆರೆಯಂತಾಗಿ ಅಸಹನೀಯ ವಾತಾವರಣ ನಿರ್ಮಾಣವಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-37-559191566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.