ಚಾಮರಾಜನಗರ: ಮಾರುಕಟ್ಟೆಯಲ್ಲಿ ಖರೀದಿಸುವ ಯಾವುದೇ ಪದಾರ್ಥ ಅಥವಾ ಸರಕುಗಳಲ್ಲಿ ಸೇವಾ ನ್ಯೂನತೆಗಳು ಕಂಡುಬಂದಾಗ ನಾಗರಿಕರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನ್ಯಾಯ ಹಾಗೂ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು ಎಂದು ಆಯೋಗದ ಅಧ್ಯಕ್ಷ ಎಚ್.ಎನ್.ಶ್ರೀನಿಧಿ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರ ಹಕ್ಕುಗಳನ್ನು ಸಂರಕ್ಷಣೆ ಮಾಡಲು ಕೇಂದ್ರ ಸರ್ಕಾರ 1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಗ್ರಾಹಕನೂ ಗುಣಮಟ್ಟದ ವಸ್ತು ಹಾಗೂ ಸೇವೆ ಪಡೆಯುವ ಸುರಕ್ಷತೆಯ ಹಕ್ಕು, ಉತ್ಪನ್ನಗಳ ಕುರಿತು ಮಾಹಿತಿ ಪಡೆಯುವ ಹಕ್ಕು, ಬಯಸಿದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು, ಮೇಲ್ಮನವಿ ಅಥವಾ ದೂರು ಸಲ್ಲಿಸುವ ವಿಚಾರಣೆ ಹಕ್ಕು ಹಾಗೂ ವಂಚನೆಗೊಳಗಾದರೆ ದೂರು ನೀಡುವ ಮತ್ತು ಪರಿಹಾರ ಪಡೆಯುವ ಹಕ್ಕು ಹೊಂದಿರುತ್ತಾರೆ.

ಮಾರುಕಟ್ಟೆಯಲ್ಲಿ ನಿಗದಿತ ಹಣ ಪಾವತಿಸಿ ರಸೀದಿ ಪಡೆದ ಯಾವುದೇ ವಸ್ತುಗಳು ನಿರ್ದಿಷ್ಟ ಅವಧಿಯಲ್ಲಿ ಕೆಟ್ಟುಹೋದರೆ, ನ್ಯೂನತೆ ಕಾಣಿಸಿಕೊಂಡರೆ ಗ್ರಾಹಕರು ಬದಲಿ ವಸ್ತು ಅಥವಾ ಪಾವತಿ ಮಾಡಿದ ಹಣವನ್ನು ಪರಿಹಾರವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಎಚ್.ಎನ್.ಶ್ರೀನಿಧಿ ಮಾಹಿತಿ ನೀಡಿದರು.

ವ್ಯಾಪಾರಿಗಳು ನೀಡುವ ರಿಯಾಯಿತಿ ಹಾಗೂ ಇತರೆ ಆಮಿಷಗಳಿಗೆ ಮಣಿದು ಗ್ರಾಹಕರು ರಸೀದಿ ಪಡೆಯದೆ ವಸ್ತುಗಳನ್ನು ಖರೀದಿಸಬಾರದು. ಅಧಿಕೃತ ಖರೀದಿ ದಾಖಲೆಗಳಿಲ್ಲದಿದ್ದರೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.

ಕಂಪೆನಿಗಳು ಸುಳ್ಳು ಮಾಹಿತಿ, ಆಮಿಷ, ಜಾಹೀರಾತು ನೀಡುವ ಮೂಲಕ ಗ್ರಾಹಕರನ್ನು ವಂಚಿಸಿದರೂ ಆಯೋಗದಲ್ಲಿ ಪರಿಹಾರ ಪಡೆಯಬಹುದು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ತಜ್ಞರ ಅಭಿಪ್ರಾಯ ಸಹಿತ, ಖರೀದಿ ದಾಖಲೆ, ಹಣ ಪಾವತಿಯ ವಿವರ ಸಹಿತ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ಕಾಯ್ದೆಯ ಪ್ರಕಾರ ಗರ್ಭದಲ್ಲಿರುವ ಮಗುವಿನಿಂದ ವೃದ್ಧರವರೆಗೂ ಎಲ್ಲರನ್ನೂ ಗ್ರಾಹಕರು ಎಂದು ಪರಿಗಣಿಸಲಾಗುತ್ತದೆ. ದೇಶದ ಯಾವುದೇ ಮೂಲೆಯಲ್ಲಿ ವಸ್ತುಗಳನ್ನು ಖರೀದಿಸಿದರೂ ವಾಸವಿರುವ ಸ್ಥಳದಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಜಿ ಸಲ್ಲಿಸಲು ಕಾನೂನು ಅವಕಾಶ ನೀಡಿದೆ. ವಸ್ತುಗಳನ್ನು ಖರೀದಿಸಿದ ದಿನದಿಂದ 2 ವರ್ಷಗಳವರೆಗೂ ಗ್ರಾಹಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಆಯೋಗದ ತೀರ್ಪು ತೃಪ್ತಿ ತರದಿದ್ದರೆ ರಾಜ್ಯ ಆಯೋಗ, ರಾಷ್ಟ್ರೀಯ ಆಯೋಗ ಹಾಗೂ ಸುಪ್ರೀಂಕೋರ್ಟ್ ವರೆಗೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅವಧಿ ಮೀರಿದ ಉತ್ಪನ್ನಗಳ ಮಾರಾಟ ಮಾಡಿದರೆ, ಸುಳ್ಳು ಮಾಹಿತಿ ನೀಡಿ ವಂಚನೆ ಮಾಡಿದರೂ ನ್ಯಾಯ ಪಡೆಯಬಹುದು. ಸಾರ್ವಜನಿಕರು ಮಾರುಕಟ್ಟೆಯಲ್ಲಿ ಖರೀದಿಸುವ ಉತ್ಪನ್ನಗಳಿಗೆ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ಖಜಾಂಚಿ ಪುಟ್ಟರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-37-343477110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.