ಚಾಮರಾಜನಗರ: ಅಪರಾಧ ಜಾಲಗಳ ಪರವಾಗಿ ಹಣ ಸ್ವೀಕರಿಸಿದ ಮತ್ತು ಹಣ ವರ್ಗಾವಣೆ ಮಾಡಿದ ಆರೋಪ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗಿದ್ದ ವ್ಯಕ್ತಿಯೊಬ್ಬ ಅಸಂಬದ್ಧವಾಗಿ ನಡೆದುಕೊಂಡು ಸಮರ್ಪಕ ದಾಖಲಾತಿ ನೀಡದ ಕಾರಣ ನಗರದ ಸಿ.ಜೆ.ಎಂ ನ್ಯಾಯಾಲಯವು ವ್ಯಕ್ತಿಗೆ ಸೈಬರ್ ಕ್ರೈಂ ಠಾಣೆಯಲ್ಲಿ 2 ದಿನಗಳ ಸಮುದಾಯ ಸೇವೆ ಮಾಡುವಂತೆ ಆದೇಶ ನೀಡಿದೆ.

ವಿವರ:ಜಿಲ್ಲಾ ವ್ಯಾಪ್ತಿಯಲ್ಲಿರುವ ಮ್ಯೂಲ್ ಖಾತೆಗಳ ನೈಜತೆ ಪರಿಶೀಲಿಸಲು ಸೈಬರ್ ಕ್ರೈಂ ಪೊಲೀಸರು ತಾಲ್ಲೂಕಿನ ಕೊತ್ತಲವಾಡಿಯ ಆನಂದ್ ಹಾಗೂ ಅವರ ತಾಯಿಗೆ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಅದರಂತೆ ಬುಧವಾರ ತಾಯಿ ಜೊತೆ ಠಾಣೆಗೆ ಹಾಜರಾಗಿದ್ದ ಆನಂದ್ ಸಿಬ್ಬಂದಿ ಜೊತೆ ಅಸಂಬದ್ಧವಾಗಿ ನಡೆದುಕೊಂಡು ಮ್ಯೂಲ್ ಖಾತೆಯ ಬಗ್ಗೆ ಸಮರ್ಪಕ ದಾಖಲಾತಿ ನೀಡಿರಲಿಲ್ಲ.

ವಿಚಾರಣೆಗೆ ಸಹಕರಿಸದೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸರು ಆನಂದ್ ವಿರುದ್ಧ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಆನಂದ್ಗೆ ಎರಡು ದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸೈಬರ್ ಠಾಣೆಯಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶ ನೀಡಿದ್ದಾರೆ. ಠಾಣೆಗೆ ಭೇಟಿನೀಡುವವರ ಜೊತೆಗೆ ಸೌಜನ್ಯಯುತವಾಗಿ ಮಾತನಾಡುವ, ಮ್ಯೂಲ್ ಖಾತೆದಾರರ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಪೊಲೀಸರಿಗೆ ನೆರವು ನೀಡುವಂತೆ ಸೂಚಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-37-2002487250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.