ಚಾಮರಾಜನಗರ: ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆ ಸುರಿಯಿತು. ಮಧ್ಯಾಹ್ನದವರೆಗೂ ಬಿರು ಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆಯಾಗುತ್ತಿದ್ದಂತೆ ಏಕಾಏಕಿ ದಟ್ಟವಾದ ಮೋಡಕವಿದು ಬಿರುಸಾಗಿ ಮಳೆ ಸುರಿಯಿತು.

ಮಳೆಯ ಜೊತೆಗೆ ಗಾಳಿಯ ಅಬ್ಬರವೂ ಹೆಚ್ಚಾಗಿದ್ದರಿಂದ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಸುಮಾರು ಅರ್ಧ ತಾಸು ಸುರಿದ ಮಳೆಯು ಬಿಸಿಲ ದಗೆಯಿಂದ ಬಳಲಿದ್ದ ಇಳೆಗೆ ತಂಪೆರದ ಅನುಭವವಾಯಿತು. ಮಳೆ ನಿಲ್ಲುತ್ತಿದ್ದಂತೆ ವಾತಾವರಣದಲ್ಲಿ ಬಿಸಿಯ ಶಾಖ ಕಡಿಮೆಯಾಗಿ ತಂಪಾದ ಗಾಳಿ ಬೀಸಿತು.

ಮಳೆ ಕೊರತೆಯಿಂದಾಗಿ ಚಾಮರಾಜನಗರ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಇದೀಗ ಸುರಿದ ಮಳೆಯಿಂದಾಗಿ ಬಿತ್ತನೆ ಕಾರ್ಯ ಆರಂಭವಾಗುವ ಮುನ್ಸೂಚನೆ ದೊರೆತಿದೆ.

ಯಳಂದೂರು ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿಯಿತು. ಬಿಳಿಗಿರಿ ರಂಗನಬೆಟ್ಟದ ಸುತ್ತಮುತ್ತಲಿನ ಭಾಗಗಳಲ್ಲಿ ಬಿರುಸು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಪರಿತಪಿಸುತ್ತಿದ್ದ ಜನರು ಹಾಗೂ ನೀರಿನ ಕೊರತೆಯಿಂದ ಆಕಾಶ ನೋಡುತ್ತಿದ್ದ ರೈತರಲ್ಲಿ ಮೊಗದಲ್ಲಿ ಮಳೆ ಮಂದಹಾಸ ಮೂಡಿಸಿದೆ.

ಸಂಜೆಯವರೆಗೂ ತಾಲ್ಲೂಕಿನಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. 4 ಗಂಟೆಯ ಸುಮಾರಿಗೆ ತುಂತುರು ಹನಿಯಾಗಿ ಆರಂಭವಾದ ಮಳೆ ಬಳಿಕ ಬಿರುಸು ಪಡೆದುಕೊಂಡು ರಭಸವಾಗಿ ಸುರಿಯಿತು. ಮಳೆ ಮೋಡ ಇದ್ದು ಮತ್ತೆ ವರುಣನ ಆಗಮನ ಸಾಧ್ಯತೆಗಳಿವೆ. ಕಾಡಂಚಿನಲ್ಲಿರುವ ಪೋಡುಗಳ ಸುತ್ತಮುತ್ತಲೂ ಉತ್ತಮ ಮಳೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಮಳೆ ಸುರಿದಿದ್ದು ಕೃಷಿಕರಲ್ಲಿ ಸಂತಸ ತಂದಿದೆ ಎಂದು ರೈತ ಮಾಂಬಳ್ಳಿ ಸುಬ್ಬಪ್ಪ ತಿಳಿಸಿದ್ದಾರೆ.

ಸಂತೇಮರಹಳ್ಳಿ, ಕುದೇರು, ಉಮ್ಮತ್ತೂರು, ಮೂಡಲ ಅಗ್ರಹಾರ ಹಾಗೂ ದೇಮಹಳ್ಳಿ ಭಾಗಗಳಲ್ಲಿ ಅರ್ಧ ಗಂಟೆ ಮಳೆ ಸುರಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-37-1957630405

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.