ಹನೂರು: ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡಿದ್ದ ಮೂರು ಆನೆಗಳ ಪೈಕಿ ಎರಡು ಆನೆಗಳನ್ನು ಸುರಕ್ಷಿತವಾಗಿ ಮೇಲೆತ್ತಿದ್ದು, ಒಂದು ಹೆಣ್ಣಾನೆ ತೀವ್ರವಾಗಿ ನಿತ್ರಾಣಗೊಂಡು ಮೇಲೇಳಲು ಸಾಧ್ಯವಾಗದೇ ಒದ್ದಾಡುತ್ತಿದೆ.

ಮಲೆ ಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿರುವ ಉಡುತೊರೆ ಜಲಾಶಯಕ್ಕೆ ಶನಿವಾರ ರಾತ್ರಿ ನೀರು ಕುಡಿಯಲು ಬಂದ ಮೂರು ಆನೆಗಳು ಕೆಸರಿಗೆ ಸಿಲುಕಿಕೊಂಡಿವೆ. ಭಾನುವಾರ ಬೆಳಿಗ್ಗೆ ಸಿಬ್ಬಂದಿ ನೋಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಹಾಯದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಲ್ಲಿ ಒಂದು ಆನೆ ತಾನಾಗೆ ಕೆಸರಿನಿಂದ ಹೊರಬಂದು ಅರಣ್ಯಕ್ಕೆ ಓಡಿ ಹೋಗಿದೆ. ಇನ್ನೊಂದು ಆನೆಯನ್ನು ಯಂತ್ರದ ಸಹಾಯದಿಂದ ಸುರಕ್ಷಿತವಾಗಿ ಮೇಲೆತ್ತಲಾಯಿತು. ಆದರೆ ಈ ಹೆಣ್ಣಾನೆಯು ಮೇಲೇಳಲು ಸಾಧ್ಯವಾಗದೇ ಒದ್ದಾಡುತ್ತಿತ್ತು.

ಮಹೇಂದ್ರ ಎಂಬ ಆನೆಯನ್ನು ಕರೆಸಿ ಅದರ ಸಹಾಯದಿಂದ ಮೇಲೆತ್ತಲು ಯತ್ನಿಸಿದರೂ ಏಳಲು ಸಾಧ್ಯವಾಗದಿದ್ದರಿಂದ ಚಿಕಿತ್ಸೆ ನೀಡಲಾಯಿತು. ಭಾನುವಾರ ರಾತ್ರಿಯಿಡೀ ಆಹಾರ ನೀಡಲಾಯಿತು. ಸೋಮವಾರ ಬೆಳಿಗ್ಗೆಯಿಂದ ಜೆಸಿಬಿ, ಕ್ರೇನ್ ಹಾಗೂ ಅಗ್ನಿಶಾಮಕ ವಾಹನದ ಸಹಾಯದಿಂದ ಆನೆಯನ್ನು ಎದ್ದು ನಿಲ್ಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ

‘ಶನಿವಾರ ರಾತ್ರಿಯಿಡೀ ಕೆಸರಿನಿಂದ ಹೊರಬರಲು ಪ್ರಯತ್ನಿಸಿ ಹೆಣ್ಣಾನೆ ನಿತ್ರಾಣಗೊಂಡಿದೆ. ಕಾಲುಗಳು ಸಹಕರಿಸುತ್ತಿಲ್ಲ. ಸಿಬ್ಬಂದಿ ಸ್ಥಳದಲ್ಲೇ ಇದ್ದು ಗಮನಿಸುತ್ತಿದ್ದಾರೆ. ಎದ್ದೇಳಲು ಸಾಧ್ಯವಾಗದಿದ್ದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ವಹಿಸಲಾಗುವುದು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-37-1664374262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.