ಯಳಂದೂರು: ‘ಹೊಸ ಹೊಸ ಫಲ ಪುಷ್ಪಗಳ ಸಸಿಗಳನ್ನು ಪರಿಚಯಿಸಬೇಕು. ಆ ಮೂಲಕ ರೈತರು ಆರ್ಥಿಕ ಹಿಡುವಳಿ ಕಟ್ಟಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.

ತಾಲ್ಲೂಕಿನ ವಡಗೆರೆಯಲ್ಲಿ ಈಚೆಗೆ ತೋಟಗಾರಿಕಾ ಇಲಾಖೆ ಅಭಿವೃದ್ಧಿ ಪಡಿಸುತ್ತಿರುವ ಹಣ್ಣಿನ ಗಿಡಗಳ ತಾಕಿಗೆ ಭೇಟಿ ನೀಡಿ ಅವರು ಮಾತನಾಡಿದರು.

‘ಇತ್ತೀಚಿನ ವರ್ಷಗಳಲ್ಲಿ ಕಲಿತವರು ಸಾಗುವಳಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಹೈಬ್ರಿಡ್ ಸಸಿಗಳನ್ನು ನೆಟ್ಟು ಉತ್ತಮ ಇಳುವರಿ ತೆಗೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಮೆಕೆಡೋಮಿಯಾ. ತೈವಾನ್ ಸೀಬೆ, ಹಸಿರು ಸೇಬು, ಅಂಜೂರ ಗಿಡಗಳನ್ನು ವಿವಿಧ ರಾಜ್ಯಗಳಿಂದ ತಂದು ನಾಟಿ ಮಾಡುತ್ತಿದ್ದಾರೆ. ಕೆಲವರು ತಮ್ಮ ಬೇಸಾಯ ಕ್ರಮಗಳನ್ನು ಬದಲಿಸಿಕೊಂಡು ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಹಣ್ಣಿನ ಫಸಲು ತೆಗೆಯುತ್ತಿದ್ದಾರೆ. ಹಾಗಾಗಿ, ಗ್ರಾಮೀಣ ರೈತರಿಗೂ ಆಧುನಿಕ ಕೃಷಿ ಪದ್ಧತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನೆರವಾಗಬೇಕು’ ಎಂದರು.

ಹತ್ತಾರು ಬಗೆಯ ಗಿಡಗಳನ್ನು ಇಲ್ಲಿ ಬೆಳೆಸಲಾಗಿದೆ. ಕಡಿಮೆ ಅವಧಿಯಲ್ಲಿ ಫಲ ನೀಡುವ ಅಡಿಕೆ, ತೆಂಗು ಅಭಿವೃದ್ಧಿಗೂ ನೆರವು ನೀಡಬೇಕಿದೆ. ಬಹುತೇಕ ಅಂಚಿನ ವ್ಯವಸಾಯಗಾರರು ಅನಕ್ಷರಸ್ಥರಾಗಿದ್ದು, ಇವರಿಗೆ ಅಲ್ಪಾವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಸಸಿಗಳನ್ನು ನೀಡಿ ಪ್ರೋತ್ಸಾಹಿಸಬೇಕು. ಉತ್ತಮ ಮಾರುಕಟ್ಟೆ, ಕೃಷಿ ತಾಂತ್ರಿಕತೆ, ನೀರಿನ ಸದ್ಬಳಕೆ ಜೊತೆಗೆ, ದೇಶಿಯ ತಳಿಗಳ ಸಸ್ಯ ವೈವಿಧ್ಯತೆ ಉಳಿಸುವ ಕೆಲಸ ಆಗಬೇಕು ಎಂದು ಹೇಳಿದರು.

ತಾಲ್ಲೂಕು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು, ‘ಮುಂಬರುವ ವರ್ಷಗಳಲ್ಲಿ ವಿದೇಶಿ ಹಣ್ಣಿನ ಗಿಡಗಳನ್ನು ಪ್ರಾಯೋಗಿಕವಾಗಿ ರೈತರಿಗೆ ನೀಡಲಾಗುವುದು. ಇಲ್ಲಿನ ಪರಿಸರ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವ ಸೂಕ್ತ ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯೋಗ ನಡೆದಿದೆ. ರೈತರು ಆಂಧ್ರಪ್ರದೇಶ, ತೈವಾನ್, ಸಿಂಗಾಪುರ, ಮಲಯಾ ದೇಶಗಳ ಹೊಸ ರುಚಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಎಇಇ ಚಂದ್ರಶೇಖರ್ ಹಾಗೂ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-37-1562120358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.